ಅರಂತೋಡು ಪೇಟೆ ಸ್ವಚ್ಛತಾ ಕಾರ್ಯಕ್ರಮ…

ಸುಳ್ಯ: ಗ್ರಾಮ ಪಂಚಾಯತ್ ಅರಂತೋಡು ,ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಸಂಘ ಅರಂತೋಡು ಮತ್ತು ವಾಹನ ಮಾಲಕ ಚಾಲಕರ ಸಂಘ ಅರಂತೋಡು ಇವುಗಳ ಸಹಯೋಗದೊಂದಿಗೆ ಭಾರತದ 75 ನೇ ಸ್ವಾತಂತ್ರ್ಯೋತ್ಸವ “ಅಜಾದಿ ಕಾ ಅಮೃತ ಮಹೋತ್ಸವ” ಪ್ರಯುಕ್ತ “ಸ್ವಚ್ಛತಾ ಹೀ ಸೇವಾ” ಅಂಗವಾಗಿ ಅರಂತೋಡು ಪೇಟೆ ಸ್ವಚ್ಛತಾ ಕಾರ್ಯಕ್ರಮ ಸೆ.26 ರಂದು ನಡೆಯಿತು.
ಸ್ವಚ್ಛತಾ ಕಾರ್ಯಕ್ರಮ ದಲ್ಲಿ ಅರಂತೋಡು ಗ್ರಾಮ ಪಂಚಾಯತ್ , ಪಂಚಾಯತ್ ಘನ ತ್ಯಾಜ್ಯ ಘಟಕದ ಸದಸ್ಯರು ವಾಹನ ಮಾಲಕ ಚಾಲಕ ಸಂಘದ ಸದಸ್ಯರು, ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿ ವರ್ಗ, ನಾಗರಿಕರು ಭಾಗವಹಿಸಿದರು