ಸುಳ್ಯ – ಎರಡು ದಿನಗಳಲ್ಲಿ 5 ಕೊರೊನ ಪಾಸಿಟಿವ್….

ಸುಳ್ಯ: ಮಗು,ಪತ್ರಕರ್ತ, ಶಿಕ್ಷಕ ಸೇರಿ ಒಟ್ಟು ಐದು ಕೊವಿಡ್ ಪಾಸಿಟಿವ್ ಪ್ರಕರಣ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಿನ್ನೆ ಹಾಗೂ ಇಂದು ದಾಖಲಾಗಿದೆ.
ಇಂದು (ಬುಧವಾರ) 3 ಕೊರೊನ ಪಾಸಿಟಿವ್ ಧೃಡವಾಗಿದ್ದು, ಇದರಲ್ಲಿ ಸುಳ್ಯದ ಪತ್ರಕರ್ತರೊಬ್ಬರು ಸೇರಿದ್ದಾರೆ. ಇನ್ನೋರ್ವ ಪಾಸಿಟಿವ್ ಬಂದ ವ್ಯಕ್ತಿ ಗಾಂಧಿನಗರದಲ್ಲಿ ರೂಂ ಮಾಡಿಕೊಂಡಿದ್ದು ಮನೆ ಮನೆಗೆ ಹೋಗಿ ಡ್ರೈ ಫ್ರೂಟ್ಸ್ ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ಮತ್ತೊಬ್ಬರು ಕಾಣಿಯೂರು ಮೂಲದವರಾಗಿದ್ದು ಕಡಬದಲ್ಲಿ ಶಿಕ್ಷಕರಾಗಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಪಾಸಿಟಿವ್ ಧೃಡವಾದ ವ್ಯಕ್ತಿಯೊಬ್ಬರ ಪತ್ನಿ ಹಾಗೂ 2 ವರ್ಷದ ಮಗುವಿಗೂ ಮಂಗಳವಾರ ಪಾಸಿಟಿವ್ ಧೃಡವಾಗಿತ್ತು. ಅವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.





