ಹಾಳಾದ ರಸ್ತೆ ಸರಿ ಮಾಡದಿದ್ದಲ್ಲಿ ರಸ್ತೆಯಲ್ಲಿ ಧರಣಿ- ನ. ಪಂ. ಸದಸ್ಯ ಶರೀಫ್ ಕಂಠಿ…

ಸುಳ್ಯ: ಆಲೆಟ್ಟಿ ರಸ್ತೆ ಹಾಗು ಮುಖ್ಯ ಹೆದ್ದಾರಿಯಲ್ಲಿ ಪೈಪ್ ಲೈನ್ ಕಾಮಗಾರಿಯಿಂದಾಗಿ ಹಾಳಾದ ರಸ್ತೆ ಸರಿಮಾಡದಿದ್ದಲ್ಲಿ ರಸ್ತೆಯಲ್ಲಿ ಧರಣಿ ಕೂರುವುದಾಗಿ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಘಟನೆ ನ. ಪಂ.ಸಭೆಯಲ್ಲಿ ನಡೆದಿದೆ.
ಪೈಪ್ ಲೈನ್ ಕಾಮಗಾರಿಯಿಂದಾಗಿ ಉಂಟಾದ ಗುಂಡಿ ಹೊಂಡಗಳಿಂದ ವಾಹನ ಸಂಚಾರಕ್ಕೆ ಭಾರಿ ತೊಂದರೆ ಉಂಟಾಗುತ್ತಿದೆ. ಧೂಳಿನಿಂದಾಗಿ ಸಾರ್ವಜನಿಕರು, ವರ್ತಕರು ಕಂಗಾಲಾಗಿದ್ದಾರೆ. ಈ ಬಗ್ಗೆ ನಗರ ಪಂಚಾಯತಿನ ಸಾಮಾನ್ಯ ಸಭೆಯಲ್ಲಿ KUWS ನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನ ಪಂ ಸದಸ್ಯ ಶರೀಫ್ ಕಂಠಿ ಅವರು ಬುಧವಾರ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸದಿದ್ದಲ್ಲಿ ರಸ್ತೆಯಲ್ಲಿ ಧರಣಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದರು. ಇದಕ್ಕೆ ವಿರೋಧ ಪಕ್ಷದ ಇತರ ಸದಸ್ಯರುಗಳು ಧ್ವನಿಗೂಡಿಸಿದರು.

Related Articles

Back to top button