ಸಿಇಟಿ ಫಲಿತಾಂಶ ಪ್ರಕಟ…

ಬೆಂಗಳೂರು: ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ.
ಮಲ್ಲೇಶ್ವರಂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಿಸಿದ್ದಾರೆ.
ಇಂಜಿನಿಯರಿಂಗ್ ಕೋರ್ಸ್ ಗಾಗಿ 1,94,419 ವಿದ್ಯಾರ್ಥಿಗಳು,ಪರೀಕ್ಷೆ ತೆಗೆದುಕೊಂಡಿದ್ದು ಇದರಲ್ಲಿ 1,75,349 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಅವರಲ್ಲಿ 1,53,470 ವಿದ್ಯಾರ್ಥಿಗಳಿಗೆ ರ‍್ಯಾಂಕ್ ನೀಡಲಾಗಿದೆ.

ಕೃಷಿ ವಿಭಾಗದಲ್ಲಿ 1,27,627, ಪಶುವೈದ್ಯಕೀಯ ವಿಭಾಗದಲ್ಲಿ 1,29,666, ಬಿಫಾರ್ಮಾ, ಡಿಫಾರ್ಮಾ ವಿಭಾಗದಲ್ಲಿ 1,55,552 ವಿದ್ಯಾರ್ಥಿಗಳು ರ‍್ಯಾಂಕ್ ಗಳಿಸಿದ್ದಾರೆ.

ಸಿಇಟಿಯಲ್ಲಿ ಟಾಪರ್ಸ್ ಆಗಿರುವವರ ವಿವರ ಹೀಗಿದೆ-

ಇಂಜಿನಿಯರಿಂಗ್:
1. ರಕ್ಷಿತ್ ಎಂ, ಆರ್ ವಿ ಕಾಲೇಜು, ಬೆಂಗಳೂರು
2. ಶುಭಾನ್ ಆರ್ – ಶ್ರೀ ಚೈತನ್ಯ ಇ ಟೆಕ್ನೋ ಶಾಲೆ, ಬೆಂಗಳೂರು
3. ಶಶಾಂಕ್ ಬಾಲಾಜಿ, ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ
ಕೃಷಿ:
1. ವರುಣ್ ಗೌಡ ಎ ಬಿ, ಎಕ್ಸ್ ಪರ್ಟ್ ಕಾಲೇಜು, ಮಂಗಳೂರು
2. ಸಂಜನಾ ಕೆ, ಬೇಸ್ ಪಿಯು ಕಾಲೇಜು, ಮೈಸೂರು
3. ಲೋಕೇಶ್ ವಿ ಜೋಗಿ, ಶ್ರೀ ರಾಮಕೃಷ್ಣ ವಿದ್ಯಾಶಾಲಾ ಪಿಯು ಕಾಲೇಜು, ಮೈಸೂರು
ಪಶುವೈದ್ಯಕೀಯ:
1. ಸಾಯಿ ವಿವೇಕ್ ಪಿ, ನಾರಾಯಣ ಇ ಟೆಕ್ನೋ ಶಾಲೆ, ಬೆಂಗಳೂರು
2. ಆರ್ಯನ್ ಮಹಲಿಂಗಪ್ಪ ಚನ್ನಾಳ್, ಪ್ರಗತಿ ಪಬ್ಲಿಕ್ ಸೆಕೆಂಡರಿ ಶಾಲೆ, ಕೋಟ
3. ಸಂಜನಾ ಕೆ, ಬೇಸ್ ಪಿಯು ಕಾಲೇಜು, ಮೈಸೂರು
ಬಿಫಾರ್ಮಾ, ಡಿಫಾರ್ಮಾ:
1. ಸಾಯಿ ವಿವೇಕ್ ಪಿ, ನಾರಾಯಣ ಇ ಟೆಕ್ನೋ ಶಾಲೆ, ಬೆಂಗಳೂರು
2. ಸಂದೀಪನ್ ನಸ್ಕರ್, ಹೊರನಾಡ ಕನ್ನಡಿಗ
3. ಪವನ್ ಎಸ್ ಗೌಡ, ನಾರಾಯಣ ಪಿಯು ಕಾಲೇಜು, ಬೆಂಗಳೂರು

Sponsors

Related Articles

Leave a Reply

Your email address will not be published. Required fields are marked *

Back to top button