ಸಂಪಾಜೆ ಪೇರಡ್ಕ ಗೂನಡ್ಕ ಸಂಭ್ರಮದ ಈದ್ ಮಿಲಾದ್ ಸಂಪನ್ನ…
ಪ್ರವಾದಿಯವರ ಸಂದೇಶ ಪಾಲಿಸಿ ಟಿ ಎಂ ಶಾಹಿದ್ ತೆಕ್ಕಿಲ್ ಕರೆ…
ಸುಳ್ಯ: ಮೊಹಿಯದ್ದೀನ್ ಜುಮಾ ಮಸೀದಿ ಪೇರಡ್ಕ ಗೂನಡ್ಕ ಇದರ ವತಿಯಿಂದ ಎರಡು ದಿವಸಗಳ ಮಿಲಾದ್ ಫೆಸ್ಟ್ 2k23 ಕಾರ್ಯಕ್ರಮಕ್ಕೆ ಜಮಾಅತ್ ಅಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್ ಅವರು ಧ್ವಜಾರೋಹಣ ಮೂಲಕ ಸೆ.27 ರಂದು ಚಾಲನೆ ನೀಡಿದರು.
ನಂತರ ಮಾತನಾಡಿದ ಟಿ ಎಂ ಶಹೀದ್ ತೆಕ್ಕಿಲ್ ಅವರು ಪ್ರವಾದಿಯವರ ಸಂದೇಶ ಪಾಲಿಸಿ ಊರಿನ ಅಭಿವೃದ್ದಿಗೆ ಮತ್ತು ಜಮಾತಿನ ಏಳಿಗೆಗೆ ದುಡಿಯಲು ಯುವಕರಿಗೆ, ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮದರಸ ವಿದ್ಯಾರ್ಥಿಗಳ ದಫ್ ನೊಂದಿಗೆ ಮೆರವಣಿಗೆ ಮೂಲಕ ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ವರಗೆ ಸಾಗಿ ಜಮಾಅತ್ ಖತೀಬರಾದ ರಿಯಾಝ್ ಫೈಝಿ ಎಮ್ಮೆಮಾಡು ನೇತೃತ್ವದಲ್ಲಿ ಮಖಾಂ ಝಿಯಾರತ್ ನಂತರ ಮಿಲಾದ್ ಫೆಸ್ಟ್ 2k23 ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳ ಪ್ರತಿಭೆಯನ್ನು ನೂರಾರು ಪೋಷಕರು, ಮಹಿಳೆಯರು ವೀಕ್ಷಿಸಿದರು. ಮೌಲೂದ್ ಪಾರಾಯಣದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಎರಡನೇ ದಿವಸ ಸೆ.28 ರಂದು ಬೆಳಗ್ಗೆ 9 ಘಂಟೆಗೆ ಖಬರ್ ಝಿಯಾರತ್ ನಂತರ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಜಮಾತ್ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದರು. ರಿಯಾಜ್ ಫೈಜಿ ಎಮ್ಮೆಮಾಡು ಉದ್ಘಾಟಿಸಿದರು. ಜಮಾಅತ್ ಕಾರ್ಯದರ್ಶಿ ಪಿ ಕೆ ಉಮ್ಮರ್, ಉಪಾದ್ಯಕ್ಷರಾದ ಟಿ ಬಿ ಹನೀಪ,ಇಬ್ರಾಹಿಂ ಸೆಟ್ಯಡ್ಕ, ಕಾರ್ಯದರ್ಶಿ ಉಸ್ಮಾನ್, ಕೆಎಂ ಸಿನಾನ್ ಪಿಎಂ, ಖಜಾಂಜಿ ಮಹಮ್ಮದ್ ಕುಂಞಿ ತೆಕ್ಕಿಲ್, ಜಮಾತ್ ಪದಾಧಿಕಾರಿಗಳು,ಎಂ ಆರ್ ಡಿ ಎ ಜಕೀರ್ ಪೇರಡ್ಕ, ಹನೀಫ್ ಪದಾದಿಕಾರಿಗಳು, ಎಸ್ ಕೆ ಎಸ್ ಎಸ್ ಎಫ್ ಪದಾಧಿಕಾರಿಗಳು, ಎಸ್ ಬಿ ವಿ ಪದಾಧಿಕಾರಿಗಳು ಖತೀಬ್ ರಿಯಾಜ್ ಫೈಜಿ ಎಮ್ಮೆಮಾಡು, ಉಸ್ತಾದರಾದ ಪತ್ತಾಹ್ ಖಾಸಿಮಿ, ಮಹಮ್ಮದ್ ಮುಸ್ಲಿಯಾರ್ ಸರಕಾರಿ ಉದ್ಯೋಗಿಗಳಾದ ಕಂದಾಯ ಇಲಾಖೆಯ ರಝಕ್, ಪೊಲೀಸ್ ಇಲಾಖೆಯ ರಹೂಫ್ ಎಸ್ ಕೆ ಎಸ್ ಎಸ್ ಎಫ್ ನ ಎನ್ ಹೆಚ್ ಹಾರಿಸ್ ದೊಡ್ಡಡ್ಕ, ಇಕ್ಬಾಲ್ ಚೆರೂರ್ ಮೊದಲಾದವರು ಉಪಸ್ಥಿತರಿದ್ದರು.
ಖಾದರ್ ಮೊಟ್ಟೆಂಗಾರ್ ವಂದನಾರ್ಪಣೆ ಮಾಡಿದರು. ಬಹುಮಾನ ವಿತರಣೆ ಮತ್ತು ಅನ್ನದಾನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.