ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುತ್ತಿರುವ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ…
ಪುತ್ತೂರಿನ ನೆಹರು ನಗರದ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯು ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿರುವ ಆವಿಷ್ಕಾರಿ ಮನೋಭಾವವನ್ನು ಸಮಾಜದ ಮುಖ್ಯಭೂಮಿಕೆಗೆ ತರುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ.
ಮಾತೃಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 63 ವಿವಿಧ ವಿದ್ಯಾಸಂಸ್ಥೆಗಳಲ್ಲಿ ಇಂಜಿನಿಯರಿಂಗ್ ಕಾಲೇಜು ಕೂಡಾ ಒಂದು. 2001ರಲ್ಲಿ ಆರಂಭಗೊಂಡ ಇಂಜಿನಿಯರಿಂಗ್ ಕಾಲೇಜು ಇಂದು ಕರಾವಳಿ ಭಾಗದ ಪ್ರತಿಷ್ಠಿತ ಕಾಲೇಜಾಗಿ ಗುರುತಿಸಿಕೊಂಡು ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದೆ. ಎನ್‍ಬಿಎ ಮಾನ್ಯತೆ ದೊರಕಿರುವುದರಿಂದ ಕಾಲೇಜು ರಾಷ್ಟ್ರಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದೆ.
ಸಂತ ಶ್ರೇಷ್ಠ ವಿವೇಕಾನಂದರ ಹೆಸರಿಗೆ ಅನುಗುಣವಾಗಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ತಾಂತ್ರಿಕ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತದೆ. ವಿಶ್ವವಿದ್ಯಾನಿಲಯ ಮಟ್ಟದ ಆಟೋಟ ಸ್ಪರ್ಧೆಗಳನ್ನು ಕಾಲೇಜು ಸಂಘಟಿಸುತ್ತಿದ್ದು ಅನೇಕ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನವನ್ನು ನೀಡುವುದರ ಜತೆಯಲ್ಲಿ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದಾರೆ. ರಾಷ್ಟ್ರ ಮಟ್ಟದ ತಾಂತ್ರಿಕ ಪ್ರಬಂಧ ಮಂಡನೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಾಕಷ್ಟು ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ವಿನ್ಯಾಸದ ಕಾರುಗಳು ಮತ್ತು ಪ್ರಾಜೆಕ್ಟ್ ಗಳು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆಯನ್ನು ತೋರಿವೆ.
ಶಿಕ್ಷಣದಲ್ಲಿ ನಿರಂತರ ಕಲಿಕೆ ಎನ್ನುವ ನೂತನ ಕಲ್ಪನೆಯೊಂದಿಗೆ ಪ್ರತಿ ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಗೆ ಕಾಲೇಜು ಕಂಕಣಬದ್ಧವಾಗಿದೆ. ಭಾರತೀಯ ತಾಂತ್ರಿಕ ಶಿಕ್ಷಣ ಸಂಘದ (ISTE) ವಿದ್ಯಾರ್ಥಿ ಘಟಕವು ಕಾಲೇಜಿನಲ್ಲಿ ಸಕ್ರಿಯವಾಗಿದ್ದು, ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ಜ್ಞಾನದ ಅಭಿವೃದ್ಧಿಗೆ ಪೂರಕವಾಗಿ ತರಬೇತಿ ಕಾರ್ಯಾಗಾರಗಳನ್ನು ನಡೆಸುತ್ತದೆ.
ಲಭ್ಯವಿರುವ ಕೋರ್ಸ್‍ಗಳು:
ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ವಿಭಾಗಗಳಿದ್ದು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್ ಎನ್ನುವ ನೂತನ ವಿಭಾಗವನ್ನು ಪ್ರಾರಂಭಿಸಲಾಗಿದೆ. ಎಂ.ಬಿ.ಎ. ಸ್ನಾತಕೋತ್ತರ ವಿಭಾಗವಿದ್ದು ಫೈನಾನ್ಸ್, ಮಾರ್ಕೆಟಿಂಗ್, ಮತ್ತು ಹ್ಯೂಮನ್ ರಿಸೋರ್ಸ್ ಎನ್ನುವ ಮೂರು ಐಚ್ಚಿಕ ವಿಷಯಗಳಿವೆ.
ಕ್ಯಾಂಪಸ್ ನೇಮಕಾತಿ:
ಇಂಜಿನಿಯರಿಂಗ್ ಕಾಲೇಜಿನ ಉದ್ಯೋಗ ನೇಮಕಾತಿ ವಿಭಾಗವು ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಅವಿರತ ಪ್ರಯತ್ನವನ್ನು ಮಾಡುತ್ತಿದೆ. ವಿದ್ಯಾರ್ಥಿಗಳನ್ನು ನೇಮಕಾತಿಗೆ ಸಜ್ಜುಗೊಳಿಸುವುದಕ್ಕಾಗಿ ಇಂಗ್ಲಿಷ್ ಸಂವಹನ ತರಬೇತಿ ಮತ್ತು ಬುದ್ಧಿ ಸಾಮರ್ಥ್ಯ ತರಬೇತಿ ನೀಡುವುದರ ಜತೆಯಲ್ಲಿ ಅಣಕು ಸಂದರ್ಶನಗಳನ್ನು ನಡೆಸಲಾಗುತ್ತದೆ. ಆರ್ಥಿಕ ಚಟುವಟಿಕೆಗಳು ಕ್ಷೀಣಿಸಿದ್ದರೂ ಸಹ ಕಾರ್ಪೊರೇಟ್ ಜಗತ್ತಿನ ಉನ್ನತ ಸಂಸ್ಥೆಗಳು ಈ ವರ್ಷದ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿವೆ. ಈ ವರ್ಷ 75ಕ್ಕೂ ಅಧಿಕ ಕಂಪನಿಗಳು ಕ್ಯಾಂಪಸ್ ನೇಮಕಾತಿಗಾಗಿ ಕಾಲೇಜಿಗೆ ಭೇಟಿ ನೀಡಿದ್ದು 300ಕ್ಕೂ ಹೆಚ್ಚು ಅರ್ಹ ವಿದ್ಯಾರ್ಥಿಗಳು ಸಂದರ್ಶನವನ್ನು ಯಶಸ್ವಿಯಾಗಿ ಪೂರೈಸಿ ನೇಮಕಾತಿ ಆದೇಶವನ್ನು ಪಡೆದುಕೊಂಡಿದ್ದಾರೆ.
ಗ್ರಂಥಾಲಯ ಮತ್ತು ಬುಕ್‍ಬ್ಯಾಂಕ್ ಸೌಲಭ್ಯ:
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಗ್ರಂಥಾಲಯದ ಜತೆಗೆ ಬುಕ್‍ಬ್ಯಾಂಕ್ ವ್ಯವಸ್ಥೆಯೂ ಕಾರ್ಯಾಚರಿಸುತ್ತಿದೆ. ವ್ಯವಸ್ಥಿತ ಗ್ರಂಥಾಲಯ ವಿದ್ಯಾರ್ಥಿಗಳಿಗೆ ಆಸರೆಯಾಗಿ ನಿಂತರೆ, ಬುಕ್‍ಬ್ಯಾಂಕ್ ವ್ಯವಸ್ಥೆಯು ಶೈಕ್ಷಣಿಕ ಉತ್ತೇಜನವನ್ನು ನೀಡುತ್ತಿದೆ. ಕಳೆದ 6 ವರ್ಷದಿಂದ ಬುಕ್ ಬ್ಯಾಂಕ್ ಸೌಲಭ್ಯವು ಲಭ್ಯವಿದ್ದು, ರಾಷ್ಟ್ರೀಯ- ಅಂತಾರಾಷ್ಟ್ರೀಯ ಜರ್ನಲ್‍ಗಳನ್ನೊಳಗೊಂಡ ಸುಸಜ್ಜಿತ ಗ್ರಂಥಾಲಯ, ಡಿಜಿಟಲ್ ಲೈಬ್ರರಿ ವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ಸಹಕಾರಿಯಾಗಿದೆ.
ಹಾಸ್ಟೆಲ್ ಸೌಲಭ್ಯ:
ಕ್ಯಾಂಪಸ್ ಒಳಗಡೆಯೇ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆಯು ಲಭ್ಯವಿದ್ದು, ಉತ್ತಮ ಸವಲತ್ತನ್ನು ನೀಡಲಾಗುತ್ತಿದೆ. ಕೇವಲ ಸಸ್ಯಾಹಾರಿ ಊಟ ಮತ್ತು ಉಪಾಹಾರ ಇಲ್ಲಿನ ವೈಶಿಷ್ಟ್ಯ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಬಾರಿ ಹಾಸ್ಟೆಲ್‍ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ.
ವಿಶೇಷ ಸೌಲಭ್ಯಗಳು:
ಅತ್ಯಾಧುನಿಕ ಬೋಧನಾ ಸೌಕರ್ಯ, ಆಧುನಿಕ ಉಪಕರಣಗಳನ್ನೊಳಗೊಂಡ ಪ್ರಯೋಗಾಲಯಗಳು, ಸೂಕ್ತ ಸಾಫ್ಟ್‍ವೇರ್ ಗಳನ್ನೂ ಹೊಂದಿರುವ ಕಂಪ್ಯೂಟರ್ ವ್ಯವಸ್ಥೆ, ಸಂಪೂರ್ಣ ವೈಫೈ ಹೊಂದಿದ ಕ್ಯಾಂಪಸ್, ರಾಗಿಂಗ್ ರಹಿತ ಶಿಸ್ತು ಬದ್ಧ ಕಲಿಕಾ ವಾತಾವರಣ. ವಿವಿಧ ಕಂಪೆನಿಗಳ ಸಲಹಾ ಕೇಂದ್ರಗಳು, ಅತ್ಯುತ್ತಮ ಶೈಕ್ಷಣಿಕ ಫಲಿತಾಂಶ, ಸ್ವಚ್ಛ ಮತ್ತು ಆರೋಗ್ಯಕರ ಸಸ್ಯಾಹಾರಿ ಉಪಾಹಾರ ಗೃಹ. ಎಟಿಎಂ ಸಹಿತ ಬ್ಯಾಂಕ್ ಸೌಲಭ್ಯ, ಜಿಮ್ ಮತ್ತು ಆರೋಗ್ಯಕೇಂದ್ರ. ಡೊನೇಶನ್ ರಹಿತ ಸರ್ಕಾರದ ನಿರ್ಧರಿತ ಬೋಧನಾ ಶುಲ್ಕ ಮತ್ತು ವಿವಿಧ ಬಗೆಯ ವಿದ್ಯಾರ್ಥಿ ವೇತನ ಸೌಲಭ್ಯವಿದೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜು ಬಸ್ಸು ವ್ಯವಸ್ಥೆಯೂ ಇದೆ
ಕಾಲೇಜಿನ ಸಿಇಟಿ ಕೋಡ್ ಸಂಖ್ಯೆ E-121 ಆಗಿರುತ್ತದೆ. ಕಾಲೇಜಿನಲ್ಲಿ ದಾಖಲಾತಿ ಪ್ರಾರಂಭವಾಗಿದ್ದು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9845065506, 9482131634 ನ್ನು ಸಂಪರ್ಕಿಸಬಹುದು ಎಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ತಿಳಿಸಿದ್ದಾರೆ.
Advt.