ಸುಳ್ಯ ಸಮಸ್ತ ಸಂಯುಕ್ತ ಜಮಾಅತ್ ವತಿಯಿಂದ ರಂಝಾನ್ ಕಿಟ್ ವಿತರಣೆ…

ಸಮಾಜಮುಖಿ ಕೆಲಸದೊಂದಿಗೆ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣಕ್ಕೆ ಒತ್ತು ನೀಡಿ-ಟಿ. ಎಂ ಶಾಹಿದ್ ತೆಕ್ಕಿಲ್...

ಸುಳ್ಯ: ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ವತಿಯಿಂದ ತಾಲ್ಲೂಕಿನ 150 ಅರ್ಹ ಕುಟುಂಬಗಳಿಗೆ ಆಹಾರ ಧಾನ್ಯಗಳ ರಂಝಾನ್ ಕಿಟ್ಟನ್ನು ಮಾ.9 ರಂದು ಸುಳ್ಯದ ಸುಪ್ರೀಂ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಕೋಶಾಧಿಕಾರಿ ಹಮೀದ್ ಹಾಜಿ ದುವಾ ನೆರವೇರಿಸಿದರು. ಸಮಸ್ತ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿ ಅಧ್ಯಕ್ಷತೆ ವಹಿಸಿದ್ದರು. ಜಾವಗಲ್ ಟ್ರಸ್ಟ್ ಅಧ್ಯಕ್ಷ ಇಸಾಕ್ ಹಾಜಿ ಪಾಜಪ್ಪಳ್ಳ ಕಿಟ್ ವಿತರಣೆಗೆ ಚಾಲನೆ ನೀಡಿದರು. ಮುಖ್ಯ ಅತಿಥಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಟಿ. ಎಂ ಶಾಹಿದ್ ತೆಕ್ಕಿಲ್ ಮಾತನಾಡಿ ಸುಳ್ಯ ಸಮಸ್ತ ಸಂಯುಕ್ತ ಜಮಾಅತ್ ಉತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು ಸಂಸ್ಥೆಯು ಸಮಾಜಮುಖಿ ಕೆಲಸದೊಂದಿಗೆ ಲೌಖಿಕ ಮತ್ತು ಧಾರ್ಮಿಕ ಶಿಕ್ಷಣಕ್ಕೆ ಒತ್ತನ್ನು ನೀಡಬೇಕು ಮತ್ತು ಮದರಸಗಳನ್ನು ಆಧುನೀಕರಣಗೊಳಿಸಿ ಸ್ಮಾರ್ಟ್ ಕ್ಲಾಸುಗಳನ್ನು ತೆರೆಯಬೇಕೆಂದರು.
ಕಾರ್ಯಕ್ರಮದಲ್ಲಿ ಸಂಯುಕ್ತ ಜಮಾಅತ್ ಉಪಾಧ್ಯಕ್ಷರುಗಳಾದ ಹಾಜಿ ಎಚ್.ಎ ಅಬ್ಬಾಸ್ ಸೆಂಟ್ಯಾರ್, ಹಾಜಿ ಇಬ್ರಾಹಿಂ ಕತರ್,ಕೋಶಾಧಿಕಾರಿ ಹಮೀದ್ ಹಾಜಿ, ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ,ಜಮೀಯತುಲ್ ಫಲಾಹ್ ಅಧ್ಯಕ್ಷ ಕೆ. ಎಂ ಅಬೂಬಕರ್ ಪಾರೆಕ್ಕಲ್ ಸಂಪಾಜೆ ಗ್ರಾ. ಪಂ. ಮಾಜಿ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಕಳಂಜ ಜುಮಾ ಅಧ್ಯಕ್ಷ ಎ.ಬಿ ಮೊಯ್ದೀನ್, ಸಂಪಾಜೆ ಜುಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಹಮೀದಿಯ, ಸುಳ್ಯ ವಲಯ SKSSF ಅಧ್ಯಕ್ಷ ಅಬೂಬಕರ್ ಪೋಪಿ ಹಾಜಿ ಅಹ್ಮದ್ ಸುಪ್ರೀಂ ಹಾಜಿ ಅಹ್ಮದ್ ಪಾರೆ, ಹಂಸ ದೊಡ್ಡತೋಟ, ಅಬ್ದುಲ್ ಖಾದರ್ ಹಾಜಿ ಅಜ್ಜಾವರ, ಅಮೀರ್ ಕುಕ್ಕುಂಬಳ , ಯು. ಪಿ ಬಶೀರ್ ಬೆಳ್ಳಾರೆ, ಸಿ. ಎಚ್ ಮುಹಮ್ಮದ್ ಪೈಂಬಚ್ಚಾಲ್ ಇಕ್ಬಾಲ್ ಸುಣ್ಣಮೂಲೆ, ಇಬ್ರಾಹಿಂ ದುಗಲಡ್ಕ, ಅಂಬ ಸಂಪಾಜೆ, ಅಬೂಬಕರ್ ಅಜ್ಜಾವರ, ಅಬ್ದುಲ್ ಖಾದರ್ ಕುಂಬರ್ಚೋಡು, ಅಬ್ದುಲ್ ಕರೀಂ ಕುಂಬರ್ಚೊಡ್, ಹನೀಫ್, ಅಬ್ದುಲ್ಲಾ ಮಾರ್ಗ ಮಂಡೆಕೋಲು, ಅಬ್ದುಲ್ಲಾ ಕನಕಮಜಲ್, ಇಸ್ಮಾಯಿಲ್ ಕಳಂಜ,ಮಿದ್ಲಾಜ್ ದಾರಿಮಿ, ಜಕರಿಯ ದಾರಿಮಿ, ಆಶಿಕ್ ಸುಳ್ಯ, ನಝೀರ್ ಸುಪ್ರೀಂ, ಕಯ್ಯೂಮ್ ಕಟ್ಟೆಕ್ಕಾರ್ ಮೊದಲಾದವರು ಉಪಸ್ಥಿತರಿದ್ದರು. ಪ್ರದಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

whatsapp image 2025 03 09 at 3.56.54 pm

Sponsors

Related Articles

Back to top button