ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಶಿವಪ್ರಸಾದ್.ಕೆ ಸೇವಾ ನಿವೃತ್ತಿ…

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಅಕೌಂಟ್ ಆಫೀಸರ್ ಆಗಿದ್ದ ಶಿವಪ್ರಸಾದ್.ಕೆ ಸೇವಾನಿವೃತ್ತಿ ಹೊಂದಿದರು.
ಕಾಲೇಜಿನ ಪ್ರಾರಂಭದ ದಿನಗಳಿಂದಲೂ ಕಛೇರಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಇವರು 21 ವರ್ಷಗಳ ಸೇವೆಯನ್ನು ಸಲ್ಲಿಸಿದ್ದಾರೆ. ಸದಾ ನಗುಮುಖದ ಸ್ನೇಹಪರತೆಯ ಇವರು ಕಾಲೇಜಿನಿಂದ ನಿವೃತ್ತಿಹೊಂದಿದ ಪ್ರಥಮ ಸಿಬ್ಬಂದಿಯಾಗಿಯೂ ಗುರುತಿಕೊಂಡರು.
ಕಾಲೇಜಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಶಾಲು ಹೊದೆಸಿ ಗೌರವಿಸಿದರು. ಸಂಚಾಲಕ ಟಿ.ಎಸ್.ಸುಬ್ರಮಣ್ಯ ಭಟ್, ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ, ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್, ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಹಾಗೂ ಕಛೇರಿ ಸಿಬ್ಬಂದಿಗಳು ಶುಭ ಹಾರೈಸಿ ಬೀಳ್ಕೊಟ್ಟರು.
ಇವರು ವಿಟ್ಲ ಸಮೀಪದ ಮೈರ ನಿವಾಸಿಯಾಗಿದ್ದು, ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ನಿವೃತ್ತಿ ಜೀವನವನ್ನು ನಡೆಸಲಿದ್ದಾರೆ.

Related Articles

Back to top button