ಪ್ರೇಕ್ಷಕರ ಬಹುನೀರಿಕ್ಷೇಯ ‘ಕಪೋ ಕಲ್ಪಿತಂ’ 26ರಂದು ತೆರೆಗೆ…

ಮಂಗಳೂರು: ಅಕ್ಷರ ಪ್ರೊಡಕ್ಷನ್‌ ಹಾಗೂ ಸವ್ಯಸಾಚಿ ಕ್ರಿಯೇಷನ್ ಬ್ಯಾನರ್‌ನಡಿ ಮೂಡಿ ಬಂದಿರುವ ‘ಕಪೋ ಕಲ್ಪಿತಂ’ ಕನ್ನಡ ಚಿತ್ರ ನ.26ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.
ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಕಪೋ ಕಲ್ಪಿತಂ ಚಿತ್ರದ ನಿರ್ದೇಶಕಿ ಹಾಗೂ ನಾಯಕಿ ಸುಮಿತ್ರ ಗೌಡ ಚಿತ್ರ ಬಿಡುಗಡೆಯ ದಿನಾಂಕವನ್ನು ತಿಳಿಸಿದರು.
ನಮ್ಮ ಕರಾವಳಿಯ ಅನೇಕ ಪ್ರತಿಭೆಗಳು ಚಿತ್ರದಲ್ಲಿ ನಟಿಸಿದ್ದು, ದ.ಕ.ಉಡುಪಿ, ಬೆಳ್ತಂಗಡಿ ಸೇರಿದಂತೆ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆದಿದ್ದು ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಶ್ರೀ ಗಣಿದೇವ್ ಕಾರ್ಕಳ ರವರು ಚಿತ್ರಕ್ಕೆ ಸಾಹಿತ್ಯ, ಕಥೆ-ಚಿತ್ರಕಥೆ, ಸಂಭಾಷಣೆ ನೀಡಿದ್ದು, ನ.26ರಂದು ಮಂಗಳೂರಿನ ಭಾರತ್ ಮಾಲ್‌ನಲ್ಲಿ ಚಿತ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಪಿವಿಆರ್‌ನಲ್ಲೂ ಚಿತ್ರ ತೆರೆ ಕಾಣುತ್ತಿದೆ.
ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಗಣಿದೇವ್ ಕಾರ್ಕಳ, ಪೀತಂ ಮಕ್ಕಿಹಾಲಿ, ಅಮೋಗ್ ಕೊಡಂಗಳ ,ರಾಜೇಶ್ ಕಣ್ಣೂರ್ , ಶಿವರಾಜ್ ಕರ್ಕೇರ ಉಪಸ್ಥಿತರಿದ್ದರು.

012f1d99 0b24 42f5 B469 4f8b63fa434a 300x157

Related Articles