ಪೌರ ಕಾರ್ಮಿಕರೊಂದಿಗೆ ಸೌಹಾರ್ದ ಈದ್ ಆಚರಿಸಿದ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ…

ಕಾರ್ಮಿಕ ಶಕ್ತಿಯಿಂದ ದೇಶ ಸುಭದ್ರ :ಕೆ. ಎಂ.ಮುಸ್ತಫ...

ಸುಳ್ಯ: ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ರಂಜಾನ್ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಸುಳ್ಯ ನಗರ ಪಂಚಾಯತ್ ನ ಪೌರ ಕಾರ್ಮಿಕರು ನಗರ ಸ್ವಚ್ಛ ಗೊಳಿಸಿ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಸಿಹಿ ಹಂಚಿ, ಧನ ಸಹಾಯ ವನ್ನು ನೀಡಿ ಅವರೊಂದಿಗೆ ಸ್ವಲ್ಪ ಕಾಲ ಬೆರೆತು ಅವರೊಂದಿಗೆ ಅವರ ಕಷ್ಟ ಸುಖಗಳ ಬಗ್ಗೆ ಅರಿತುಕೊಂಡರು.
ಈ ಸಂದರ್ಭದಲ್ಲಿ ಶ್ರೀ ಶಾರದಾಂಬಾ ಸೇವಾ ಸಮಿತಿ ಗೌರವಾಧ್ಯಕ್ಷ ಗೋಕುಲ್ ದಾಸ್, ನಗರ ಪಂಚಾಯತ್ ಲೆಕ್ಕ ಪರಿಶೋಧಕ ರಮೇಶ್, ರವಿಚಂದ್ರ, ಹರೀಶ್ ಮೊದಲಾದವರು ಉಪಸ್ಥಿತರಿದ್ದರು.

whatsapp image 2026 03 20 at 6.24.01 pm

Related Articles