ಸಾಹಿತಿ ಸಾರಾ ಅಬೂಬಕ್ಕರ್ ರವರ ಅಂತಿಮ ಸಂಸ್ಕಾರ- ಸರಕಾರಿ ಮರ್ಯಾದೆ ನೀಡದೆ ಅವಮಾನ ಟಿ ಎಂ ಶಾಹಿದ್ ತೆಕ್ಕಿಲ್ ಖಂಡನೆ…

ಸುಳ್ಯ: ಗಡಿನಾಡ ಕನ್ನಡಿಗಳಾದ ಚಂದ್ರಗಿರಿ ತೀರದ ಖ್ಯಾತಿಯ ಕಾದಂಬರಿಗಾರ್ತಿ, ಸಾಹಿತಿ, ಹಿರಿಯ ಲೇಖಕಿ, ಮಹಿಳಾ ಹೋರಾಟಗಾರ್ತಿಯಾದ ಸಾರಾ ಅಬೂಬಕ್ಕರ್ ರವರ ಅಂತ್ಯ ಸಂಸ್ಕಾರವನ್ನು ಯಾವುದೇ ಸರಕಾರಿ ಗೌರವ ನೀಡದೆ ಜಿಲ್ಲಾಡಳಿತ ಮತ್ತು ಸರಕಾರವು ಸಾಹಿತಿ ಸಾರಾ ಅಬೂಬಕ್ಕರ್ ಅವರಿಗೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅವಮಾನ ಎಸಗಿದೆ ಎಂದು ಕೆ.ಪಿ.ಸಿ.ಸಿಯ ಮಾಜಿ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಅಸಮಾದಾನ ವ್ಯಕ್ತ ಪಡಿಸಿರುದ್ದಾರೆ.
ಅಂದಿನ ಮದ್ರಾಸ್ ಪ್ರಾಂತ್ಯದ ಅವಿಜಿತ ದಕ್ಷಿಣಕನ್ನಡ ಜಿಲ್ಲೆಯ ಭಾಗವಾದ ಕಾಸರಗೋಡಿನ ಬಿ.ಸಿ.ಎಂ ಶಾಲೆಯಲ್ಲಿ 1953 ರಲ್ಲಿಯೇ ಮೆಟ್ರಿಕ್ಯುಲೇಶನ್ ಪಾಸಾದ ದಕ್ಷಿಣ ಭಾರತದ ಪ್ರಥಮ ಮುಸ್ಲಿಂ ಮಹಿಳೆಯಾಗಿರುವ ಸಾರಾ ಅಬೂಬಕ್ಕರ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರು, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಮತ್ತು ಗೌರವಕ್ಕೆ ಭಾಜನರಾಗಿದ್ದಾರೆ. ಆದರೆ ಅವರ ಅಂತ್ಯ ಸಂಸ್ಕಾರವನ್ನು ಸರಕಾರವು ರಾಜ್ಯ ಮರ್ಯಾದೆಯನ್ನು ನೀಡದೆ, ಪೊಲೀಸ್ ಇಲಾಖೆಯ ಕುಶಲತೋಪುಗಳನ್ನು ಸಿಡಿಸದೆ, ಸಕಲ ಸರಕಾರಿ ಮರ್ಯಾದೆಯನ್ನು ನೀಡದೆ ಕಡೆಗಣಿಸಿರುವುದಕ್ಕೆ ಕಾಂಗ್ರೆಸ್ ಮುಖಂಡ ಟಿ.ಎಂ ಶಹೀದ್ ತೆಕ್ಕಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸರಕಾರದ ಈ ನಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಟಿ.ಎಂ ಶಹೀದ್ ತೆಕ್ಕಿಲ್
Sponsors

Related Articles

Back to top button