ಸುಳ್ಯ ಗಾಂಧಿನಗರ ಕೇಂದ್ರ ಜುಮ್ಮಾ ಮಸ್ಜಿದ್ ನಲ್ಲಿ ಸಡಗರ ದ ಈದುಲ್ ಫಿತ್ರ್ ರಂಜಾನ್ ಹಬ್ಬ…
ಜಗತ್ತು ಹತ್ತಿರವಾಗುತ್ತಿದೆ, ಮನಸ್ಸು ದೂರವಾಗುತ್ತದೆ, ಸಮಾನತೆ, ಸಹೋದರತೆಯ ರಂಜಾನ್ ಸಂದೇಶ ವಿಶ್ವಕ್ಕೆ ಮಾದರಿ : ಖಾಮಿಲ್ ಸಖಾಫಿ...
ಸುಳ್ಯ: ಒಂದು ತಿಂಗಳ ಪವಿತ್ರ ರಂಜಾನ್ ತಿಂಗಳ ಉಪವಾಸ, ಆತ್ಮ ಸಂಸ್ಕರಣೆ, ದಾನ ಧರ್ಮಗಳ ಆಚರಣೆ ನಂತರ ಮಾ. 20 ರಂದು ರಂಜಾನ್ ಹಬ್ಬವನ್ನು ಸಂಭ್ರಮ ಸಡಗರದಿಂದ ಮುಸ್ಲಿಂ ಸಮುದಾಯದವರು ಆಚರಿಸಿದರು.
ಸುಳ್ಯ ಗಾಂಧಿನಗರ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಬೆಳಗ್ಗಿನಿಂದಲೇ ಹೊಸ ಉಡುಪುಗಳನ್ನು, ತಕ್ಬಿರ್ ಮೊಳಗಿಸಿಕೊಂಡು ವೃದ್ಧರು, ಮಕ್ಕಳೂ ಸೇರಿದಂತೆ ಸುಮಾರು 2 ಸಾವಿರಕ್ಕೂ ಮಿಕ್ಕಿದ ಮುಸ್ಲಿಂ ಭಾಂದವರು ಆಗಮಿಸಿ ಪೆರ್ನಾಳ್ ಆಚರಣೆಯ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಖುತುಬಾ ಪ್ರವಚನ ಮತ್ತು ಈದ್ ವಿಶೇಷ ನಮಾಜ್ ಗೆ ನೇತೃತ್ವ ನೀಡಿದ ಗಾಂಧಿನಗರ ಜುಮಾ ಮಸ್ಜಿದ್ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ಯವರು ಸಂದೇಶ ನೀಡಿ ಮದುವೆ ಸಮಾರಂಭ ಗಳು ಶ್ರೀಮಂತಿಕೆಯನ್ನು ಪ್ರದರ್ಶಿಸುವ ವೇದಿಕೆಯಾಗಬಾರದು, ಆಡಂಬರದಿಂದ ಸರಳತೆ ಮತ್ತು ಸಂಸ್ಕೃತಿ ಗೆ ಮರಳಬೇಕು ಎಂದು ಅವರು ಕರೆ ನೀಡಿದರು.
ನಂತರ ಎಲ್ಲರು ಪರಸ್ಪರ ಆಲಿಂಗನ, ಕುಟುಂಬ ಸಂದರ್ಶನ, ಸಿಹಿ, ವಿಶೇಷ ಖಾದ್ಯಗಳನ್ನು ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆಎಂಎಸ್ ಮಹಮ್ಮದ್, ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಾಮೊಟ್ಟೆ, ಸುಳ್ಯ ವರ್ತಕರ ಸಂಘ ದ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಜನತಾ,ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಹಾಜಿ ಎಸ್. ಅಬ್ದುಲ್ಲ ಕಟ್ಟೆಕ್ಕಾರ್ಸ್, ಪದಾಧಿಕಾರಿಗಳಾದ ಕೆ. ಬಿ. ಇಬ್ರಾಹಿಂ, ಹಮೀದ್ ಬೀಜಕೊಚ್ಚಿ, ಎಸ್. ಎಂ. ಹಮೀದ್ ಯಾಕೂಬ್ ಎಸ್ ಟಿ, ನಗರ ಪಂಚಾಯತ್ ನಿಕಟ ಪೂರ್ವ ಸದಸ್ಯರುಗಳಾದ ಉಮ್ಮರ್ ಕೆ. ಎಸ್. ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ಸಿದ್ದೀಕ್ ಕೊಕ್ಕೊ ಮೊದಲಾದವರು ಭಾಗವಹಿಸಿದ್ದರು.






