ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಸುಲೈಮಾನ್ ಹಾಜಿ ಅವರಿಗೆ ಸನ್ಮಾನ…..
ಪುತ್ತೂರು: ಪ್ರವಾದಿಯವರ ಜನ್ಮದಿನದ ಅಂಗವಾಗಿ ಭಾನುವಾರ ಕೆಮ್ಮಾರ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಹಾಜಿ ಸುಲೈಮಾನ್ ಆಕಿರೆ(73) ಅವರ ಸೇವೆಯನ್ನು ಗುರುತಿಸಿ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೆಮ್ಮಾರ ಜುಮ್ಮಾ ಮಸೀದಿಯ ಖತೀಬ್ ಇಲ್ಯಾಸ್ ಸಖಾಫಿ, ಮೋನು ಹಾಜಿ ಕೆಮ್ಮಾರ, ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಅಝೀಝ್ ಬಿ.ಕೆ, ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆಮ್ಮಾರ, ರಶೀದ್ ಹಾಜಿ ಬಡ್ಡಮೆ ಸನ್ಮಾನಿತರನ್ನು ಶಾಲು ಹೊದಿಸಿ, ಕುರ್‍ಅನ್, ತಸ್ಬಿಹ್ ಮಾಲೆ ಜೊತೆ ಸ್ಮರಣಿಕೆ ನೀಡಿ ಗೌರವಿಸಿದರು.
ಕೆಮ್ಮಾರ ಮಾತ್ರವಲ್ಲದೆ ನೆರೆಯ ಉಪ್ಪಿನಂಗಡಿ, ಆತೂರು, ಗಂಡಿಬಾಗಿಲು ಸೇರಿದಂತೆ ಹಲವು ಮೊಹಲ್ಲಾಗಳಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಖಬರ್ ಅಗದು ದಫನ ಕಾರ್ಯ ನಡೆಸಿರುವುದು. ಕೆಮ್ಮಾರ ಮದ್ರಸ ನಿರ್ಮಾಣದ ಸಂದರ್ಭದಲ್ಲಿ 500ಕ್ಕೂ ಅಧಿಕ ಖಬರ್ ಸ್ಥಳಾಂತರ ಮಾಡಿರುವುದು. ಕೆಮ್ಮಾರ ಮಸೀದಿಯಲ್ಲಿ ನಿರಂತರ 35 ವರ್ಷಗಳಿಂದ ನೇರ್ಚೆ ಇನ್ನಿತರ ಸಂದರ್ಭದಲ್ಲಿ ಅಡುಗೆ ಕೆಲಸ ಮಾಡಿರುವುದನ್ನು ಗುರುತಿಸಿ ಸುಲೈಮಾನ್ ಹಾಜಿ ಅವರನ್ನು ಸನ್ಮಾನಿಸಲಾಗಿದೆ.