ಭೂಮಿಕಾ ಅವರಿಗೆ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ…

ಬಂಟ್ವಾಳ: ಡಿ. 7 ರಂದು ಉತ್ತರಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದ ರಾಷ್ಟ್ರಮಟ್ಟದ ಗಣಿತ ಮೇಳದಲ್ಲಿ “ಸಮ ಬಹುಭುಜಾಕೃತಿಗಳ ಗುಣಧರ್ಮಗಳ ಆಧಾರಿತ ಪ್ರದರ್ಶನ” ಎಂಬ ಗಣಿತ ಮಾದರಿ ಪ್ರದರ್ಶನದಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ಭೂಮಿಕಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಇವರು ಕುರ್ಮಾನ್ ಎಂಬಲ್ಲಿಯ ಮೋಹನ್ ಭಂಡಾರಿ ಹಾಗೂ ಇಂದಿರಾ ದಂಪತಿಯ ಪುತ್ರಿ.
ಮೊದಲ ಬಾರಿಗೆ ಗಣಿತ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಇವರಿಗೆ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಸಂಚಾಲಕರು, ಮುಖ್ಯೋಪಾಧ್ಯಾಯರು, ಬೋಧಕರು ಹಾಗೂ ಬೋಧಕೇತರರು ಅಭಿನಂಧಿಸಿದರು.