ಪಿ ಬಿ ಅಬ್ದುಲ್ ರಜ್ಹಾಕ್ ನಿಧನ – ಕೆಪಿಸಿಸಿ ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಸಂತಾಪ…

ಮಂಗಳೂರು: ದ ಕ ಮತ್ತು ಉಡುಪಿ ಜಿಲ್ಲಾ ಜಂಇಯ್ಯತುಲ್ ಫಲಾಹ್ ಇದರ ಮಾಜಿ ಅಧ್ಯಕ್ಷರು ಅದರ ಏಳಿಗೆ ಮತ್ತು ಬೆಳವಣಿಗೆಯಲ್ಲಿ ದುಡಿದ ಸಾಮಾಜಿಕ ಮುಖಂಡ ಪಿ ಬಿ ಅಬ್ದುಲ್ ರಜ್ಹಾಕ್ ಅವರ ನಿಧನಕ್ಕೆ ಕೆಪಿಸಿಸಿ ಮುಖ್ಯ ವಕ್ತಾರ ಹಾಗು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರ ನಿಧನದಿಂದ ಒಬ್ಬ ಒಳ್ಳೆಯ ಸಮಾಜ ಸೇವಕನನ್ನು ಅವಿಭಜಿತ ಜಿಲ್ಲೆ ಕಳೆದುಕೊಂಡಿದೆ. ಅವರ ಅಗಲುವಿಕೆಯಿಂದ ಆದ ದುಃಖವನ್ನು ಸಹಿಸುವ ಶಕ್ತಿ ಅಲ್ಲಾಹು ಅವರ ಕುಟುಂಬಕ್ಕೆ ಮತ್ತು ಜನತೆಗೆ ಕರುಣಿಸಲಿ ಎಂದು ಟಿ ಎಂ ಶಾಹಿದ್ ತೆಕ್ಕಿಲ್ ಪ್ರಾರ್ಥಿಸಿದ್ದಾರೆ.
