ಸುಳ್ಯದಲ್ಲಿ ಇಂದಿರಾ ಗಾಂಧಿ ಜನ್ಮ ದಿನಾಚರಣೆ…

ಸುಳ್ಯ: ಭಾರತ ದೇಶದ ಮಾಜಿ ಪ್ರದಾನಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಆಚರಿಸಲಾಯಿತು.
ಕಾಂಗ್ರೆಸ್ ಮುಖಂಡ ಹಾಗೂ ಕೆ.ಪಿ.ಸಿ.ಸಿ.ಯ ಮಾಜಿ ಕಾರ್ಯದರ್ಶಿ ಟಿ.ಎಂ. ಶಾಹೀದ್ ತೆಕ್ಕಿಲ್ ಇಂದಿರಾ ಗಾಂಧಿಯವರ ಭಾವ ಚಿತ್ರಕ್ಕೆ ಪುಷ್ಪ ನಮನವನ್ನು ಅರ್ಪಿಸಿ ಮಾತನಾಡಿ, ಇಂದಿರಾ ಗಾಂಧಿಯವರು ಭಾರತ ದೇಶದ ಸಮರ್ಥ ಆಡಳಿತ ನಡೆಸಿದ ಪ್ರಧಾನಿಯಾಗಿದ್ದರು. ನೆರೆಯ ದೇಶ ಪಾಕಿಸ್ಥಾನ ವಿರುದ್ದ ಸಮರ್ಥವಾಗಿ ಹೋರಾಟ ಮಾಡಿದವರು. ಎಲ್ಲಾ ಜನರನ್ನು ಸಮಾನವಾಗಿ ನೋಡುತ್ತಾ ಆಡಳಿತ ನಡೆಸಿದವರು. ಬಡವರ ಮತ್ತು ಶೋಷಿತರ ಪರವಾಗಿ ಕೆಲಸ ಮಾಡಿದರು. ಬ್ಯಾಂಕ್ ಗಳನ್ನು ರಾಷ್ಟ್ರೀಯಗೊಳಿಸಿ ಬಡವರು ಬ್ಯಾಂಕ್ ಗಳಿಗೆ ಬರಲು ಪ್ರೇರೆಪಿಸಿದ ಮಹಾನಾಯಕಿ ಹಾಗೂ ದೇಶ ಕಂಡ ಅತ್ಯುತ್ತಮ ಮಹಿಳಾ ನಾಯಕಿಯಾಗಿದ್ದರು. ಅವರ ಆದರ್ಶದೊಂದಿಗೆ ನಾವೆಲ್ಲರೂ ಮುನ್ನಡೆಯಬೇಕೆಂದು ಟಿ.ಎಂ.ಶಾಹೀದ್ ಹೇಳಿದರು.
ಸುಳ್ಯ ನಗರ ಕಾಂಗ್ರೆಸ್ ನಾಯಕ ದಿನೇಶ್ ಅಂಬೆಕಲ್ಲು ಈ ಸಂದರ್ಭದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ನ್ಯಾಯವಾದಿ ಶ್ರೀಹರಿ ಕುಕ್ಕುಡೇಲು, ಕನಕಮಜಲು ಗ್ರಾ.ಪಂ.ಮಾಜಿ ಸದಸ್ಯ ಮಹ್ಮದ್ ಪವಾಝ್, ಕಛೇರಿ ಸಹಾಯಕ ಗಂಗಾಧರ ಉಪಸ್ಥಿತರಿದ್ದರು.

F174979f 1d26 4d23 B870 07f59a94b4bc 300x225

Related Articles

Leave a Reply

Your email address will not be published. Required fields are marked *