ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಪ್ಲಾಸ್ಮಾ ದಾನಿಗಳ ರಕ್ತದ ಮಾದರಿ ಸಂಗ್ರಹ ಕಾರ್ಯಕ್ರಮ

ಸುಳ್ಯ :ಎಸ್ ಕೆ ಎಸ್ ಎಸ್ ಎಫ್ ವಿಖಾಯ ರಕ್ತದಾನಿ ಬಳಗ ದ.ಕ,ಜಿಲ್ಲೆ, ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕ್ಲಸ್ಟರ್, ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆ ಹಾಗೂ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ, (ರಿ) ಪಠೇಲ್ ಚಾರಿಟೇಬಲ್ ಟ್ರಸ್ಟ್ (ರಿ), ಪಠೇಲ್ ಮೆಡಿಕಲ್ & ಲ್ಯಾಬೋರೇಟರಿ ಸುಳ್ಯ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು , ಕೆ.ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಬೃಹತ್‌ ಸಾರ್ವಜನಿಕ ರಕ್ತದಾನ ಶಿಬಿರ ,ರಕ್ತ ವರ್ಗೀಕರಣ ಶಿಬಿರ, ಪ್ಲಾಸ್ಮಾ ದಾನಿಗಳ ರಕ್ತದ ಮಾದರಿ ಸಂಗ್ರಹ ಕಾರ್ಯಕ್ರಮವು ಸೆ.26 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಿತು .
ಕಾರ್ಯಕ್ರಮದಲ್ಲಿ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಅಲ್ಹಾಜ್ ಇಸ್ಹಾಕ್ ಬಾಖವಿ ದುವಾ ನೆರವೇರಿಸಿದರು. ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ರಝಾಕ್ ಕರಾವಳಿ ವಹಿಸಿದ್ದರು. ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಚೇರ್ಮನ್ ಬಹು ಇಸ್ಮಾಯಿಲ್ ತಂಙಳ್ ಉದ್ಘಾಟಿಸಿದರು. ಸಮಾರಂಭದಲ್ಲಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ , ಎಸ್‌ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಅಧ್ಯಕ್ಷ ಜಮಾಲ್ ಬೆಳ್ಳಾರೆ, ಕೆ.ವಿ.ಜಿ.ಆರ್ಯುವೇದ ಕಾಲೇಜ್ ವೈದ್ಯರಾದ ಡಾ।ಹರ್ಷವರ್ಧನ್ ,ಅರಂತೋಡು ಜಮಾಅತ್ ಅಧ್ಯಕ್ಷರಾದ ಅಶ್ರಫ್ ಗುಂಡಿ,ಪಠೇಲ್ ಮೆಡಿಕಲ್ ಮಾಲಕರಾದ ಬದ್ರುದ್ದೀನ್ ಪಠೇಲ್,ಸುನ್ನಿ ಮಹಲ್ ಫೆಡರೇಶನ್ ಅಧ್ಯಕ್ಷ ಇಬ್ರಾಹಿಂ ಹಾಜಿ ಕತ್ತಾರ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಾದ ಉನೈಸ್ ಪೆರಾಜೆ,ದ.ಕ.ವಿಖಾಯ ರಕ್ತದಾನಿ ಉಸ್ತುವಾರಿ ತಾಜುದ್ದೀನ್ ಟರ್ಲಿ,ಸುಳ್ಯ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಚೇರ್ಮನ್ ಶರೀಫ್ ಅಜ್ವಾವರ,ಎಲಿಮಲೆ ಶಾಖಾ ಅಧ್ಯಕ್ಷ ಸಿದ್ದೀಕ್ ತಟ್ಟುಕಡ ,ಸುಳ್ಯ ವಲಯ ವಿಖಾಯ ಕನ್ವೀನರ್ ಕಲಂದರ್ ಎಲಿಮಲೆ, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಅಬ್ದುಲ್ ಮಜೀದ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ರಕ್ತದಾನ ಶಿಬಿರದಲ್ಲಿ ಕೊಡಗು ಜಿಲ್ಲೆಯ ಪ್ರಮುಖ ನೇತಾರರು ಭಾಗವಹಿಸಿ ರಕ್ತದಾನ ಮಾಡಿದರು. ಸುಳ್ಯ ಕ್ಲಸ್ಟರ್ ಕಾರ್ಯದರ್ಶಿ ಅಬ್ದುಲ್ ಖಾದರ್ ಸ್ವಾಗತಿಸಿ ಸುಳ್ಯ ವಿಖಾಯ ಕ್ಲಸ್ಟರ್ ಕನ್ವೀನರ್ ತಾಜುದ್ದೀನ್ ಅರಂತೋಡು ವಂದಿಸಿದರು.ಜುಬೈರ್ ,ಆಶೀಕ್ ಸುಳ್ಯ ,ಮುಝಮ್ಮಿಲ್,ಆಶೀಕ್ ,ಹನೀಫ್ ಗೂನಡ್ಕ ಸಹಕರಿಸಿದರು .

018001d4 Ec92 4453 9ede 06ae08f44711 300x169

C367162d 4a84 4e5b 9ece 0ef14d3028c4 300x169

Related Articles

Leave a Reply

Your email address will not be published. Required fields are marked *