ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಸಂಸ್ಕಾರ ನೀಡಿ ಸದೃಢ ರಾಷ್ಟ್ರ ನಿರ್ಮಾಣದ ಜವನೆರ್ ತುಡರ್ ನ ಪ್ರಯತ್ನ ಶ್ಲಾಘನೀಯ: ಪ್ರಭಾಕರ ಪ್ರಭು…

ಬಂಟ್ವಾಳ : ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಸಂಸ್ಕಾರ ನೀಡಿ ಸದೃಢ ರಾಷ್ಟ್ರ ನಿರ್ಮಾಣದ ಜವನೆರ್ ತುಡರ್ ನ ಪ್ರಯತ್ನ ಶ್ಲಾಘನೀಯ ಎಂದು ಸಿಎ ಬ್ಯಾಂಕ್ ಸಿದ್ಧಕಟ್ಟೆಯ ಅಧ್ಯಕ್ಷ ಪ್ರಭಾಕರ ಪ್ರಭು ಹೇಳಿದರು.
ಅವರು ಜವನೆರ್ ತುಡರ್ ಟ್ರಸ್ಟ್ (ರಿ) ಸಿದ್ಧಕಟ್ಟೆ ವಲಯ ಇದರ ಆಶ್ರಯದಲ್ಲಿ ಸಿದ್ಧಕಟ್ಟೆ ನೇತ್ರಾವತಿ ಸಭಾಭವನದಲ್ಲಿ ಜರಗಿದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ ಹಾಗೂ ವೃತ್ತಿ ಮಾರ್ಗದರ್ಶನ ಮಂಥನ -2024 ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ ಸೀಮಾ ಸುದೀಪ್ ಸಿದ್ಧಕಟ್ಟೆ ವಹಿಸಿದ್ದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಂಯೋಜಕ ಪ್ರವೀಣ್ ಕುಮಾರ್, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಪೈಯರ್ ಅದ್ಯಕ್ಷ ಶಿವಪ್ರಸಾದ್, ರಾಯಿಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು, ನಮ್ಮ ಜವನೆರ್ ಟ್ರಸ್ಟ್ ರಾಯಿ ಅಧ್ಯಕ್ಷ ಪ್ರದೀಪ್ ರಾಯಿ, ಮಡಿವಾಳ ಯುವಬಳಗ ಅಧ್ಯಕ್ಷ ಸಂದೇಶ್ ಅಂತರ, ಜವನೆರ್ ತುಡರ್ ಸದಸ್ಯ ಪ್ರವೀಣ್ ಕುಪ್ಪೆಟ್ಟು ಉಪಸ್ಥಿತರಿದ್ದರು.
ಟ್ರಸ್ಟ್ ಸಂಸ್ಥಾಪಕ ದಿನೇಶ್ ಸುವರ್ಣ ರಾಯಿ ಪ್ರಸ್ತಾವನೆಗೈದು ಸ್ವಾಗತಿಸಿ. ಸದಸ್ಯ ಪ್ರಜ್ವಲ್ ಸಂಗಬೆಟ್ಟು ಕಾರ್ಯಕ್ರಮ ನಿರೂಪಿಸಿದರು.