ಅಬ್ದುಲ್ ರಹ್ಮಾನ್ ಹಾಜಿ ಪಾಧೂರ್ ತೆಕ್ಕಿಲ್ ನಿಧನ…

ಕಾಸರಗೋಡು: ಕರ್ನಾಟಕ ಹಾಗು ಕೇರಳದ ಪ್ರಮುಖ ಕ್ಲಾಸ್ 1 ಗುತ್ತಿಗೆದಾರ ಹಾಸನ ಸಾ ಮಿಲ್ ಮಾಲಕ, ಕೊಡಲಿಪೇಟೆ ಸಾ ಮಿಲ್ ಮಾಲಕ, ಹಾಸನ ಜಿಲ್ಲಾ ವಕ್ಫ್ ಬೋರ್ಡಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅಬ್ದುಲ್ ರಹಮಾನ್ ಹಾಜಿ ಪಾಧೂರ್ (75)ಅಲ್ಪ ಕಾಲ ಅನಾರೋಗ್ಯದಿಂದ ಜು. 15 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಪತ್ನಿ ಆಯೇಷಾ ಮೂಲೆಯಿಲ್ ತೆಕ್ಕಿಲ್, ಪುತ್ರ ಖ್ಯಾತ ಕಿಡ್ನಿ ಸ್ಪೆಷಲಿಸ್ಟ್ ಡಾಕ್ಟರ್ ಮೊಯಿದೀನ್ ನಫಷೀರ್, ಪುತ್ರಿ ನಶ್ರೀನ್ ಭಶೀರ್, ಹಾಸನ ಮತ್ತು ಮಂಗಳೂರಿನ ಜನಪ್ರಿಯ ಆಸ್ಪತ್ರೆಯ ಪಾಲುದಾರ, ಅಳಿಯ ಡಾಕ್ಟರ್ ಬಷೀರ್, ಬಂದು ಮಿತ್ರರನ್ನು ಅವರು ಅಗಲಿದ್ದಾರೆ.
ತೆಕ್ಕಿಲ್ ಜುಮಾ ಮಸ್ಜಿದ್ ನಲ್ಲಿ ದಫನ ಕಾರ್ಯ ನೆರೆವೇರಿಸಲಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್, ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು ಸಹಿತ ಹಲವಾರು ಉದ್ಯಮಿಗಳು, ವಿವಿದ ಕ್ಷೇತ್ರದ ಗಣ್ಯ ವ್ಯಕ್ತಿಗಳು ಆಗಮಿಸಿ ಸಂತಾಪ ವ್ಯಕಪಡಿಸಿದರು.

Related Articles

Back to top button