ಶ್ರೀ ಶಾರದಾ ಅಂಬಿಕ ಮಂದಿರ (ರಿ) ಸಜೀಪ ಮುನ್ನೂರು – 64 ನೇ ವಾರ್ಷಿಕೋತ್ಸವ…

ಬಂಟ್ವಾಳ: ಶ್ರೀ ಶಾರದಾ ಅಂಬಿಕ ಮಂದಿರ (ರಿ) ಶಾರದ ನಗರ ಸಜೀಪ ಮುನ್ನೂರು ಇದರ 64 ನೇ ವಾರ್ಷಿಕೋತ್ಸವದ ಅಂಗವಾಗಿ ಚರಣ್ ಕುಮಾರ್ ಜುಮಾದಿ ಗುಡ್ಡೆ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ಜರಗಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಶುಭ ಹಾರೈಸಿದರು. ಪ್ರೇಮಾಜಿ ಶೆಟ್ಟಿ, ಪಂಚಾಯತಿ ಸದಸ್ಯರಾದ ಸುಂದರ ಪೂಜಾರಿ, ಸರೋಜಿನಿ, ದಯಾಲಕ್ಷ್ಮಿ, ಮಂದಿರದ ಅಧ್ಯಕ್ಷರಾದ ಸತೀಶ್ ಗಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷ ಕಮಲಾಕ್ಷಿ ಗಟ್ಟಿ, ಪದ್ಮನಾಭ ಕೊಟ್ಟಾರಿ, ತಿಮ್ಮಪ್ಪ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ಎಸ್ ಪರಮೇಶ್ವರ ಸ್ವಾಗತಿಸಿ, ರಮೇಶ್ ಕುಲಾಲ್ ಧನ್ಯವಾದ ನೀಡಿದರು. ವಿಜೇಶ್ ಪೂಜಾರಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳ್ಳಿಪಾಡಿ ಗುತ್ತು ಮಂದಿರಕ್ಕೆ ಭೇಟಿ ನೀಡಿದರು.

whatsapp image 2023 03 20 at 7.30.12 am
Sponsors

Related Articles

Back to top button