ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನ ಮಂತ್ರಿ ದಿ.ಇಂದಿರಾ ಗಾಂಧಿಯವರ 39ನೇ ಪುಣ್ಯ ತಿಥಿ ಆಚರಣೆ…

ಸುಳ್ಯ: ಮಾಜಿ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ 39ನೇ ವರ್ಷದ ಪುಣ್ಯ ತಿಥಿ ಕಾರ್ಯಕ್ರಮ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆಯಿತು.
ಕಾರ್ಯಕ್ರಮದಲ್ಲಿ ದಿ.ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರ.ಕಾರ್ಯದರ್ಶಿ ಮುಸ್ತಫಾ ಜನತಾ ನುಡಿ ನಮನವನ್ನು ಸಲ್ಲಿಸಿದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಪಿ ಎಸ್ ಗಂಗಾಧರ್, ದಿನೇಶ್ ಅಂಬೆಕಲ್ಲು, ಸಿದ್ದೀಕ್ ಕೊಕ್ಕೋ, ಶಾಫಿ ಕುತ್ತಮಟ್ಟೆ, ಜಿ ಕೆ ಹಮೀದ್, ಅಡ್ವಕೇಟ್ ಪವಾಝ್, ಶಹೀದ್ ಪಾರೆ, ಗಂಗಾಧರ ಮೇನಾಲ ಮೊದಲಾದವರು ಉಪಸ್ಥಿತರಿದ್ದರು. ಮುಖಂಡರಾದ ಪಿ ಎಸ್ ಗಂಗಾಧರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಅಂಬೆಕಲ್ಲು ವಂದಿಸಿದರು.