ವಿಶ್ವ ಭಾರತಿ ರಜತ ವೈಭವ -ರಾಮಾಯಣ ದಶಪರ್ವ ತಾಳಮದ್ದಳೆ…

ಬಂಟ್ವಾಳ:ವಿಶ್ವ ಭಾರತಿ ಯಕ್ಷ ಸಂಜೀವಿನಿ(ರಿ) ಮುಡಿಪು ಇದರ ರಜತ ಸಂಭ್ರಮ ವಿಶ್ವ ಭಾರತಿ ರಜತ ವೈಭವದ ಅಂಗವಾಗಿ ರಾಮಾಯಣ ದಶಪರ್ವ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ತುಳು ಶಿವಳ್ಳಿ ಸಭಾಭವನ ಬಿಸಿರೋಡ್ ಇಲ್ಲಿ ಜು. 19 ರಂದು ಯಕ್ಷ ದಶಾವತಾರಿ ಕೆ.ಗೋವಿಂದ ಭಟ್ ಉದ್ಘಾಟಿಸಿದರು.
ತುಳು ಶಿವಳ್ಳಿ ಸಂಘ ಬಂಟ್ವಾಳ ಅಧ್ಯಕ್ಷ ರಾಜ ರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಮಣ್ಯ ಭಟ್, ಖ್ಯಾತ ಯಕ್ಷಗಾನ ಕಲಾವಿದ ವಿದ್ವಾಂಸ ಉಜಿರೆ ಅಶೋಕ ಭಟ್, ಶಂಕರ ಸೇವಾ ಪ್ರತಿಷ್ಠಾನ ಬಂಟ್ವಾಳ ಅಧ್ಯಕ್ಷ ಕೈಯೂರು ನಾರಾಯಣ ಭಟ್, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪ್ರಶಾಂತ ಹೊಳ್ಳ ನೇತೃತ್ವದಲ್ಲಿ ಶ್ರೀರಾಮ ಪಟ್ಟಾಭಿಷೇಕ ತಾಳಮದ್ದಳೆ ಜರಗಿತು. ವಿದ್ಯಾ ಐತಾಳ, ಪ್ರಶಾಂತ ಗಟ್ಟಿ, ಕುದುರೆ ಕೊಡ್ಲು ರಾಮಮೂರ್ತಿ, ರಾಮದಾಸ್ ವಗೆನಾಡು, ರಾಮ ಹೊಳ್ಳ, ಎಸ್.ಅಶೋಕ್ ಭಟ್, ಸುಬ್ರಾಯ ಹೊಳ್ಳ , ನಾ. ಕಾರಂತ ಪೆರಾಜೆ, ಕಲಾವಿದರಾಗಿ ಭಾಗವಹಿಸಿದರು.