ಎಡನೀರು ಮಠಕ್ಕೆ ಕರ್ನಾಟಕ ವಿಧಾನ ಪರಿಷತ್ ನ ಮುಖ್ಯ ಸಚೇತಕ ಸಲೀಂ ಅಹಮ್ಮದ್ ಬೇಟಿ…

ಕಾಸರಗೋಡು: ಕರ್ನಾಟಕ ವಿಧಾನ ಪರಿಷತ್ ನ ಮುಖ್ಯ ಸಚೇತಕರು ಹಾಗೂ ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷರಾದ ಸಲೀಂ ಅಹಮ್ಮದ್ ಮತ್ತು ಕೆ.ಪಿ.ಸಿ.ಸಿ ಯ ಮುಖ್ಯ ವಕ್ತಾರ, ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ಅ. 3 ರಂದು ಕಾಸರಗೋಡಿನ ಪ್ರಸಿದ್ಧ ಎಡನೀರು ಮಠಕ್ಕೆ ಬೇಟಿ ನೀಡಿ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದರು.
ಈ ಸಂಧರ್ಭದಲ್ಲಿ ಸ್ವಾಮೀಜಿಯವರು ಸಲೀಂ ಅಹಮ್ಮದ್ ರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಮುಖಂಡರಾದ ಮಾಹಿನ್ ಕೆಲೋಟ್ ಉಪಸ್ಥಿತರಿದ್ದರು.
