ದರ್ಖಾಸ್ ಹಿಲ್ ರೋಡ್ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಸ್ಥಳ ಪರಿಶೀಲನೆ…

ಸುಳ್ಯ: ತೆಕ್ಕಿಲ್ ಪ್ರತಿಷ್ಠಾನ(ರಿ) ಇದರ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ರವರ ವಿಶೇಷ ಮುತುವರ್ಜಿಯಿಂದ ಸಂಪಾಜೆ ಗ್ರಾಮ ಪಂಚಾಯತ್ ಮೂರನೇ ವಾರ್ಡ್ ದರ್ಖಾಸ್ ಹಿಲ್ ರೋಡ್ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ
ವಿಧಾನ ಪರಿಷತ್ ಸದಸ್ಯರಾದ ಬಿ ಕೆ ಹರಿಪ್ರಸಾದ್ ರವರ ಅನುದಾನದಿಂದ ಬಿಡುಗಡೆಗೊಂಡ 5 ಲಕ್ಷ ರೊಪಾಯಿ ಮೊತ್ತದ ಕಾಂಕ್ರೀಟ್ ರಸ್ತೆ ಸ್ಥಳ ಪರಿಶೀಲನೆಯನ್ನು ಜಿಲ್ಲಾ ಪಂಚಾಯತ್ ಇಂಜಿನಿಯರ್ ಮಣಿಕಂಠ ನೇತೃತ್ವದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಪಿ ಕೆ ಅಬುಶಾಲಿ ಗೂನಡ್ಕ,ಎಸ್ ಕೆ ಹನೀಫ,ದರ್ಕಾಸ್ ಬೂತ್ ಅಧ್ಯಕ್ಷರಾದ ಸಿ ಎಂ ಅಬ್ದುಲ್ಲ,ರಹೀಮ್ ಬೀಜದಕಟ್ಟೆ ,ಕಾಂಟ್ರಾಕ್ಟ್ರರ್ ಅಶ್ರಫ್,ಅಜರುದ್ದೀನ್ ಗೂನಡ್ಕ ,NSUI ಪ್ರಧಾನ ಕಾರ್ಯದರ್ಶಿ ಉಬೈಸ್ ಪಿ ಯು,ಸಂಶುದ್ದೀನ್,ಮುತ್ತಲೀಬ್,ಮುಜಾಫ್ಫರ್, ಮೊಯ್ದು ದರ್ಕಾಸ್ ಮೊದಲಾದವರು ಉಪಸ್ಥಿತರಿದ್ದರು.

IMG 20211217 WA0004 300x225 IMG 20211217 WA0003 300x225 IMG 20211217 WA0002 225x300

Related Articles