ಸಂಧ್ಯಾ ರಶ್ಮಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ…

ಸುಳ್ಯ: ಕುರುಂಜಿಭಾಗ್‌ನಲ್ಲಿರುವ ಸಂಧ್ಯಾ ರಶ್ಮಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಡಿ.18 ರಂದು ಸಂಧ್ಯಾ ರಶ್ಮಿ ಸಂಕೀರ್ಣದಲ್ಲಿ ನಡೆಯಿತು.
ಸಭೆಯು ಸಂಘದ ಅಧ್ಯಕ್ಷರಾದ ಡಾ| ಶ್ರೀ.ಎಸ್.ರಂಗಯ್ಯರವರ ಅಧ್ಯಕ್ಷತೆಯಲ್ಲಿ ನೆರವೇರಿತು. ಪ್ರಾರ್ಥನೆಯನ್ನು ಶ್ರೀಮತಿ ಗಿರಿಜರವರು ನೆರವೇರಿಸಿದರು. ಅಗಲಿದ ಭಾರತೀಯ ಸೇನಾ ಮುಖ್ಯಸ್ಥರು ಮತ್ತು ಅವರೊಂದಿಗಿದ್ದ ಪ್ರಮುಖರಿಗೆ, ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ನುಡಿ ನಮನ ಶ್ರೀ ಕೇಶವ ಮಾಸ್ತರ್ ನಿರ್ವಹಿಸಿದರು.
ಮಹಾಸಭೆಗೆ ನೋಟೀಸನ್ನು ಅನುಮೋದಿಸಿದ ನಂತರ ಗತಸಭೆಯ ವರದಿ, ವಾರ್ಷಿಕ ವರದಿ, ಬಜೆಟಿಗಿಂತ ಮೀರಿ ಖರ್ಚಾದ ಬಾಬ್ತುಗಳು, 2021-22ರ ಸಾಲಿನ ಅಂದಾಜು ಬಜೆಟ್ ಆಡಿಟ್ ವರದಿಗಳನ್ನು ಪರಿಶೀಲಿಸಿ ಸರ್ವಾನುಮತದಿಂದ ಅಂಗೀಕರಿಸಲಾಯ್ತು. ಸಾಲ ಸೌಲಭ್ಯಕ್ಕಾಗಿ ಉಪನಿಬಂಧನೆ ತಿದ್ದು ಪಡಿಯನ್ನು ಅಂಗೀಕರಿಸಿ ಅನುಮೋದಿಸಲಾಯಿತು. ಲಾಭಾಂಶದಲ್ಲಿ ಸದಸ್ಯರಿಗೆ ಶೇಕಡ 5 ರಷ್ಟು ಡಿವಿಡೆಂಟ್ ಘೋಷಿಸಲಾಯಿತು. ಶ್ರೀ ಅಬ್ದುಲ್ಲ ಮಾಸ್ತರ್ ಸ್ವಾಗತಿಸಿ, ಸಿ.ಇ.ಓ ಕೃಷ್ಣಪ್ರಸಾದ್ ಕೆ.ಎಸ್. ಧನ್ಯವಾದದೊಂದಿಗೆ ಸಭೆಯು ಮುಕ್ತಾಯವಾಯಿತು.

Related Articles

Back to top button