ಪೆರ್ನೆ- ಅನಾಥ ಮಹಿಳೆಗೆ ಗ್ರಾಮಾಭಿವೃದ್ಧಿ ಸದಸ್ಯರಿಂದ ಸಹಕಾರ…
ಬಂಟ್ವಾಳ: ಬಿಳಿಯೂರು ಗ್ರಾಮದ ಪದ ಬರಿ ಪೇಜಕೊಡೆ ಕಲ್ಯಾಣಿ ಆಚಾರ್ಯ ಇವರು ಒಂಟಿಯಾಗಿ ವಾಸವಾಗಿದ್ದು, ಇವರ ಮನೆಯ ಸುತ್ತ ಮತ್ತು ಮನೆಯ ಮೇಲೆ ಚಂಡ ಮುಳ್ಳಿನ ಪೊದೆ ಸುತ್ತುವರಿದು ಮನೆಯ ಒಳಗಡೆ ಒಂದು ಭಾಗದಲ್ಲಿ ನೀರು ತುಂಬಿತ್ತು. ಇದನ್ನು ಮನಗಂಡ ವಾರ್ಡಿನ ಪಂಚಾಯತ್ ಸದಸ್ಯ ನವೀನ್ ಕುಮಾರ್ ಯವರು ಪೆರ್ನೆ ವಲಯ ಶೌರ್ಯ ತಂಡದ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಪೆರ್ನೆ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ತಂಡದ ಸದಸ್ಯರು ಮಳೆಯನ್ನು ಲೆಕ್ಕಿಸದೆ ಸತತ ಪ್ರಯತ್ನದ ಫಲವಾಗಿ ಮುಳ್ಳಿನ ಪೊದೆಯನ್ನು ತೆರವುಗೊಳಿಸಿ ಹಿರಿಯ ಜೀವಕ್ಕೆ ವಾಸಿಸಲು ಯೋಗ್ಯವಾಗುವಂತೆ ಮಾಡಲಾಯಿತು. ಪೆರ್ನೆ ಪಂಚಾಯಿತ್ ಕಾರ್ಯದರ್ಶಿ ರಾಜೇಶ್ ಹಾಗೂ ವಲಯ ಮೇಲ್ವಿಚಾರಕಿ ಶಾರದಾ ,ನವೀನ್ ಕುಮಾರ್ ಪದಬರಿ,
ಅಸ್ಮಿತಾ, ಸುರೇಶ್ ಪೂಜಾರಿ, ರಮೇಶ್ ನಾಯ್ಕ್,ಅಶೋಕ್ ದೇವಾಡಿಗ, ಕೇಶವ ಉದ್ವಲೆ,
ಪುರುಷೋತ್ತಮ್ ಶೆಟ್ಟಿ, ಜನಾರ್ದನ ಪೆರ್ನೆ,ಗೋಪಾಲ ಪಲ್ಯ,ಕೃಷ್ಣಪ್ಪ ಮಡಿವಾಳ, ಮಮತಾ ಶ್ರಮದಾನ ಮಾಡಿದರು.