ವಿದ್ಯಾರ್ಥಿಗಳಿಂದ ತಂಡ ಒಡ್ಡೂರು ಫಾರ್ಮ್ಸ್ ಗೆ ಭೇಟಿ…

ಬಂಟ್ವಾಳ: ಸರಕಾರಿ ಆಂಗ್ಲಮಾಧ್ಯಮ ಶಾಲೆ ದಡ್ಡಲಕಾಡು ಇದರ SSLC ವಿದ್ಯಾರ್ಥಿಗಳ ತಂಡ ಒಡ್ಡೂರು ಫಾರ್ಮ್ಸ್ ಗೆ ಭೇಟಿ ನೀಡಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರೊಂದಿಗೆ ಕೃಷಿ ಸಂವಾದ ನಡೆಸಿದರು.
ಶಿಕ್ಷಣದ ಜೊತೆಗೆ ಕೃಷಿ ಕ್ಷೇತ್ರದಲ್ಲಿಯೂ ವಿದ್ಯಾರ್ಥಿಗಳು ಆಸಕ್ತಿ ಬೆಳೆಸುವಂತೆ ಶಾಸಕರು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರಕಾಶ್ ಅಂಚನ್, ಮುಖ್ಯೋಪದ್ಯಾಯರಾದ ರಮಾನಂದ್,ಶಿಕ್ಷಕಿ ಅನಿತಾ,ಪುರುಷೋತ್ತಮ ಅಂಚನ್ ಉಪಸ್ಥಿತರಿದ್ದರು.