“ಪ್ರಕೃತಿಯೇ ಮಹಾಮಾತೆ” ಪುಸ್ತಕ ಲೋಕಾರ್ಪಣೆ…

ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಸಾಹಿತ್ಯ ಪರ ಅಮೃತ ಪ್ರಕಾಶ ಪತ್ರಿಕೆ ವತಿಯಿಂದ ನಡೆದ 41 ನೇ ಸರಣಿ ಕೃತಿ ಬಿಡುಗಡೆ ಲೇಖಕ, ವಿಜಯಾ ಬ್ಯಾಂಕ್‌ನ ನಿವೃತ್ತ ಮುಖ್ಯ ಪ್ರಬಂಧಕರಾದ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿಯವರ ಕೃತಿ “ಪ್ರಕೃತಿಯೇ ಮಹಾಮಾತೆ” ಎಂಬ ಪುಸ್ತಕ ಲೋಕಾರ್ಪಣೆಯು ಮಂಗಳೂರಿನ ಪತ್ರಿಕಾ ಭವನದಲ್ಲಿ ಜೂನ್ 27 ರಂದು ನಡೆಯಿತು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಕೃಷ್ಣ ಕೈಡಿಟ್ ಕೋ-ಅಪರೇಟಿವ್ ಸೊಸೈಟಿ ಮಂಗಳೂರು ಇದರ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈ ಯವರು ವಹಿಸಿದರು.
“ಪ್ರಕೃತಿಯೇ ಮಾಹಾಮಾತೆ” ಕೃತಿಯನ್ನು ಎಸ್.ಡಿ.ಎಂ. ಪಿ.ಜಿ. ಮ್ಯಾನೇಜ್‌ಮೆಂಟ್ ಸೆಂಟರ್‌ನ ನಿವೃತ್ತ ಪ್ರಾಂಶುಪಾಲರು ಮತ್ತು ನಿದೇರ್ಶಕರಾದ ಡಾ. ದೇವರಾಜ್ ಕೆ. ಕೃತಿ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಸಮಾಜಸೇವಕ ವಿಕಾಸ ಸೇವಾ ಪ್ರತಿಷ್ಠಾನ ಸಂಘದ ಅಧ್ಯಕ್ಷರಾದ ಸದಾನಂದ ಉಪಾಧ್ಯಾಯ ಮತ್ತು ಕೃತಿಯ ಲೇಖಕರಾದ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ, ಅಮೃತಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಉಪಸ್ಥಿತರಿದ್ದರು.

Related Articles

Back to top button