ಅಮೃತ ಪ್ರಕಾಶ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ…

ಬಂಟ್ವಾಳ: ಅಮೃತ ಪ್ರಕಾಶ ಪತ್ರಿಕೆಯ 10ನೇ ವರುಷ ದ ಸಂಭ್ರಮ ಸಲುವಾಗಿ ಅಮೃತ ಪ್ರಕಾಶ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಡಾ.ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಿದರು. ಅಮೃತ ಪ್ರಕಾಶ ವಿಶೇಷ ಸಂಚಿಕೆಯನ್ನು ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ರಾಗ ತರಂಗ ಸಂಸ್ಥೆ ಯ ಮೊದಲ ಮಹಿಳಾ ಅಧ್ಯಕ್ಷೆ ಆಶಾ ಹೆಗ್ಡೆ ಇದರು ಡಾ.ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು .ಶಿಕ್ಷಕಿ ಸುರೇಖಾ ಯಾಲವಾರ ಕಾರ್ಯಕ್ರಮ ನಿರೂಪಿಸಿದರು. ಅರುಣ ನಾಗರಾಜ್ ವಂದಿಸಿದರು.