ಗೂನಡ್ಕ ಎಸ್ ಕೆ ಎಸ್ ಎಸ್ ಎಫ್ ವತಿಯಿಂದ ಮಾಸಿಕ ಮಜ್ಲಿಸ್ ನ್ನೂರ್ ಹಾಗೂ ತಹ್ಲೀಲ್ ಸಮರ್ಪಣಾ ಕಾರ್ಯಕ್ರಮ…
ಸುಳ್ಯ: ಎಸ್ ಕೆ ಎಸ್ ಎಸ್ ಎಫ್ ಗೂನಡ್ಕ ಪೇರಡ್ಕ ಶಾಖೆ ವತಿಯಿಂದ ಮಾಸಿಕ ಮಜ್ಲಿಸುನ್ನೂರ್ ಹಾಗೂ ಪಾಣಕ್ಕಾಡ್ ಸೈಯದ್ ಹೈದರಾಲಿ ಶಿಹಾಬ್ ತಂಙಳ್ ಹೆಸರಿನಲ್ಲಿ ಖತಮುಲ್ ಕುರ್ ಅನ್ ದುವಾ ಹಾಗೂ ತಹ್ಲೀಲ್ ಕಾರ್ಯಕ್ರಮ ಮಾ.10ರಂದು ಪೇರಡ್ಕ ಮಸೀದಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಾಜಿದ್ ಅಝ್ಅರಿ ವಹಿಸಿದ್ದರು. ಪೇರಡ್ಕ ಖತೀಬರಾದ ರಿಯಾಝ್ ಫೈಝಿ ಮಜ್ಲಿಸ್ ನ್ನೂರ್ ಗೆ ನೇತೃತ್ವ ನೀಡಿ ಮಾತನಾಡಿ ಪಾಣಕ್ಕಾಡ್ ಕೊಡಪ್ಪನಕಲ್ ಮನೆತನವು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಹಾಗೂ ಸೈಯದ್ ಮಹಮ್ಮದಾಲಿ ಶಿಹಾಬ್ ತಂಙಳರ ಹಾಗೂ ಹೈದರಾಲಿ ಶಿಹಾಬ್ ತಂಙಳರ ಕುರಿತು ಅವರ ಅಪಾರವಾದ ಪವಾಡಗಳಿಂದ ಪ್ರಸಿದ್ಧ ಪಡೆದಂತ ಚರಿತ್ರೆಯನ್ನು ವಿವರಿಸಿ ಅವರ ಮಾರ್ಗದರ್ಶನ ನಮಗೆಲ್ಲಾ ಮಾದರಿ ಎಂದರು.
ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯದ ನೂತನ ಅದ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ಲಾ ಫೈಝಿ ಉಸ್ತಾದರನ್ನು ಜಮಾಅತಿನ ಗೌರವಾದ್ಯಕ್ಷರಾದ ಟಿ. ಎಂ ಶಾಹಿದ್ ತೆಕ್ಕಿಲ್ ಅವರು ಶಾಲು ಹೊದಿಸಿ ಸನ್ಮಾನಿಸಿದರು.
ಎಸ್ ಕೆ ಎಸ್ ಎಸ್ ಎಫ್ ಗೂನಡ್ಕ ಶಾಖೆಯ ಪ್ರಧಾನ ಕಾರ್ಯದರ್ಶಿ ಕಾದರ್ ಮೊಟ್ಟೆಂಗಾರ್ ಸರ್ವರನ್ನೂ ಸ್ವಾಗತಿಸಿದರು
ಗ್ರಾಮ ಪಂಚಾಯ್ತಿ ಅದ್ಯಕ್ಷರಾದ ಜಿ ಕೆ ಹಮೀದ್,ಟಿ.ಎಂ ರಝಾಕ್ ಹಾಜಿ, ಸುಳ್ಯ ವಲಯದ ಕಾರ್ಯದರ್ಶಿ ಆಶಿಕ್,ಎಸ್ ವೈ ಎಸ್ ಸುಳ್ಯ ಅದ್ಯಕ್ಷರಾದ ಹಮೀದ್ ಹಾಜಿ, ಸುಪ್ರೀಂ ಅಹಮದ್, ಪಾರೆ ಅಹಮ್ಮದ್, ಶಹೀದ್ ಪಾರೆ, ಅರಂತೊಡು ಜಮಾಅತ್ ಕಾರ್ಯದರ್ಶಿ ಕೆ ಎಂ ಮೂಸಾನ್,ಅಬೂಬಕ್ಕರ್ ಪಾರೆಕ್ಕಲ್,ತಾಜುದ್ದೀನ್ ಅರಂತೊಡು ,ಪಿ. ಕೆ ಉಮ್ಮರ್, ಪಾಂಡಿ ಅಬ್ಬಾಸ್, ಮಹಮ್ಮದ್ ಕುಂಞ ತೆಕ್ಕಿಲ್, ತಾಜುದ್ದೀನ್ ಟರ್ಲಿ, ಹಕೀಂ ದರ್ಕಾಸ್,ಹಾಗೂ ಜಮಾಅತಿನ ಸದಸ್ಯರು ಎಸ್ ಕೆ ಎಸ್ ಎಸ್ ಎಫ್ ಸದಸ್ಯರು ಉಪಸ್ಥಿತರಿದ್ದರು.
ಕೊನೆಯಲ್ಲಿ ಸೀರಣಿ ವಿತರಿಸಲಾಯಿತು . ನಂತರ ಮಾಸಿಕ ಸಭೆ ನಡೆಯಿತು.