ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಕಾರ್ಯಾಧ್ಯಕ್ಷರ ನೇಮಕ – ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹೀದ್ ತೆಕ್ಕಿಲ್ ಅಭಿನಂದನೆ…

ಸುಳ್ಯ: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಕಾರ್ಯಾಧ್ಯಕ್ಷರನ್ನಾಗಿ ಧರ್ಮಜ ಉತ್ತಪ್ಪ ಟಿ.ಎಂ. ಇವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರು ನೇಮಕಗೊಳಿಸಿರುದಕ್ಕೆ ಕೆಪಿಸಿಸಿ ಯ ಮಾಜಿ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಟಿ.ಎಂ.ಶಾಹೀದ್ ತೆಕ್ಕಿಲ್ ಅಭಿನಂದನೆ ಸಲ್ಲಿಸಿದ್ದಾರೆ.
ಧರ್ಮಜ ಉತ್ತಪ್ಪ ಟಿ.ಎಂ. ಅವರ ಅಧಿಕಾರವಧಿಯಲ್ಲಿ ಪಕ್ಷವು ಎಲ್ಲಾ ರೀತಿಯ ಯಶಸ್ಸನ್ನು ಗಳಿಸಲಿ ಎಂದು ಹಾರೈಸಿದ್ದಾರೆ ಮತ್ತು ಮಾಜಿ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಂಜುನಾಥ್ ಅವರಿಗೂ ಶುಭ ಹಾರೈಸಿದ್ದಾರೆ.

ಟಿ.ಎಂ.ಶಾಹೀದ್ ತೆಕ್ಕಿಲ್

Related Articles

Back to top button