ಅರಂತೋಡು ಜಮಾಅತ್ ವತಿಯಿಂದ ಕನಿಷ್ಠ ವೇತನ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ರಿಗೆ ಸನ್ಮಾನ…

ನನಗೆ ಸಿಕ್ಕಿದ ಸನ್ಮಾನ ಪ್ರಶಸ್ತಿಗಳೆಲ್ಲವು ಜಮಾಅತ್ ನ ಹಿರಿಯರಿಗೆ ಅರ್ಪಿಸುತ್ತೇನೆ – ಟಿ.ಎಂ ಶಹೀದ್ ತೆಕ್ಕಿಲ್...

ಸುಳ್ಯ: ಅರಂತೋಡು ಬದ್ರಿಯಾ ಜುಮಾ ಮಸೀದಿ ಹಾಗೂ ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ಇದರ ವತಿಯಿಂದ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ಎಂ ಶಹೀದ್ ತೆಕ್ಕಿಲ್ ರವರನ್ನು ಅ.12 ರಂದು ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು. ಸನ್ಮಾನವನ್ನು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ನೆರವೇರಿಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಟಿ.ಎಂ ಶಾಹಿದ್ ತೆಕ್ಕಿಲ್ ರವರು ನನ್ನ ಅಜ್ಜ ಮೊಹಮ್ಮದ್ ಹಾಜಿಯವರ ನೇತೃತ್ವದಲ್ಲಿ ಅಂದಿನ ಅನೇಕ ಹಿರಿಯರ ತ್ಯಾಗದ ಫಲವಾಗಿ ಅರಂತೋಡಿನಲ್ಲಿ ಮಸೀದಿ ನಿರ್ಮಾಣಗೊಂಡಿತು 2003ರಲ್ಲಿ ಮಸೀದಿಯ ಪುನರ್ ನಿರ್ಮಾಣ ಸಂದರ್ಭದಲ್ಲಿ ನನಗೆ ಕಟ್ಟಡ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು ಒಳ್ಳೆಯ ಯುವಕರ ತಂಡ ಇತ್ತು. ಜೊತೆಗೆ ಡಾ| ಶಾಹ್ ಉಸ್ತಾದ್ ರವರ ಮಾರ್ಗದರ್ಶನ, ವಕ್ಫ್ ಇಲಾಖೆ ಮತ್ತು ದಾನಿಗಳ ಸಹಾಯ, ಸಹಕಾರ ದಿಂದ ಇಲ್ಲಿ ಉತ್ತಮವಾದ ಮಸೀದಿ ಮತ್ತು ಮದರಸ ನಿರ್ಮಾಣ ಮಾಡಲು ಸಾಧ್ಯವಾಯಿತು. ನನ್ನನ್ನು ಸಾಮಾಜಿಕ ಮತ್ತು ಧಾರ್ಮಿಕ ವಾಗಿ ಎತ್ತರಕ್ಕೆ ಬೆಳೆಯಲುಅರಂತೋಡು ಮಸೀದಿಮತ್ತು ಅನ್ವರುಲ್ ಹುಧಾ ಎಸೋಸಿ ಯೇಶನ್ ಸಂಸ್ಥೆ ಗಳೇ ಕಾರಣ, ಆದುದರಿಂದ ನನಗೆ ಸಿಕ್ಕಿರುವ ಗೌರವ,ಸನ್ಮಾನ ಪ್ರಶಸ್ತಿಗಳನ್ನೆಲ್ಲ ನಮ್ಮ ಹಿರಿಯರಿಗೆ ಅರ್ಪಿಸುತ್ತೇನೆ ಎಂದರು.ಸದರ್ ಅಶ್ರಫ್ ಮುಸ್ಲಿಯಾರ್ ಅಡ್ಕಾರ್, ನ್ಯಾಯವಾದಿ ಮೂಸಾ ಪೈಂಬಚ್ಚಾಲ್, ಪಠೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬದುರುದ್ದೀನ್ ಪಠೇಲ್, ಎ.ಹೆಚ್.ವೈ.ಎ ಕಾರ್ಯದರ್ಶಿ ಪಸೀಲು, ಮಾತನಾಡಿ ಶುಭ ಹಾರೈಸಿದರು. ಸಹಾಯಕ ಅಧ್ಯಾಪಕ ಅಬ್ದುಲ್ ರಹೀಮಾನ್ ಮುಸ್ಲಿಯಾರ್, ಜಮಾಅತ್ ಕಾರ್ಯದರ್ಶಿ ಕೆ.ಎಂ ಮೂಸಾನ್, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಜುಬೈರ್, ಕಾರ್ಯದರ್ಶಿ ಸಂಶುದ್ಧೀನ್ ಕ್ಯೂರ್, ಮದರಸ ಸಂಚಾಲಕ ಅಮೀರ್ ಕುಕ್ಕುಂಬಳ, ಸಂಶುದ್ಧೀನ್ ಪೆಲ್ತಡ್ಕ, ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್ ಪಠೇಲ್, ಮೊಯಿದು ಕುಕ್ಕುಂಬಳ, ಮುಜೀಬ್, ಹನೀಫ್, ಹಾಜಿ ಅಝರುದ್ಧೀನ್ ಕೆ.ಎಮ್ ಉಸ್ಮಾನ್, ಟಿ.ಎಂ ಜಾವೇದ್ ತೆಕ್ಕಿಲ್, ತಾಜುದ್ಧೀನ್ ಅರಂತೋಡು, ಹನೀಫ್ ಕುನ್ನಿಲ್, ಮುಝಮ್ಮಿಲ್ ಕುಕ್ಕುಂಬಳ, ಜಾವೇದ್ ಪಾರೆಕ್ಕಲ್, ಆಶಿಕ್ ಕುಕ್ಕುಂಬಳ ಮುಸ್ತಫ ಎ.ಇ, ಬಾತಿಷ ಕುಕ್ಕುಂಬಳ, ಮೊಯಿದು ಕುಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕೆ.ಎಂ ಮೂಸಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

whatsapp image 2025 10 13 at 4.31.19 pm

whatsapp image 2025 10 13 at 4.31.19 pm (1)

Related Articles

Back to top button