ಮಾಣಿ ಜಂಕ್ಷನ್ ನಲ್ಲಿ ಕಾರುಗಳೆಡರ ಡಿಕ್ಕಿ-ಕಾರಿನ ಮುಂಭಾಗ ಜಖಂ…

ಬಂಟ್ವಾಳ,ಫೆ.16: ರಾಷ್ಟ್ರೀಯ ಹೆದ್ದಾರಿ ಮಾಣಿ -ಮೈಸೂರು ಜಂಕ್ಷನ್ ನಲ್ಲಿ ಇಂದು ಬೆಳಗ್ಗೆ ಫ್ಲೈ ಓವರ್ ಕೆಳಗಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಕಾರಿಗೆ ಉಪ್ಪಿನಂಗಡಿ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಬರುತ್ತಿದ್ದ ಕಾರೊಂದು ಡಿಕ್ಕಿ‌ ಹೊಡೆದು ಕಾರುಗಳೆರಡರ ಮುಂಭಾಗ ಪುಡಿಪುಡಿಯಾಗಿದೆ. ವಾಹನ ಚಾಲಕರಿಬ್ಬರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಫ್ಲೈ ಓವರ್ ಕೆಳಗಡೆಯೇ ಇರುವ ಈ ಜಂಕ್ಷನ್ ನಲ್ಲಿ ಸ್ವಲ್ಪ ಗಮನ ತಪ್ಪಿದರೂ ಅಪಘಾತವಾಗುವ ಸಂಭವ ಇದೆ. ಇಲ್ಲಿ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಉಪ್ಪಿನಂಗಡಿ ಕಡೆಯಿಂದ ಬರುವ ಸರ್ವಿಸ್ ರಸ್ತೆಗೆ ಹಂಪ್ಸ್ ಹಾಕುವುದರಿಂದ ಅಪಘಾತ ತಪ್ಪಿ ಸಬಹುದೆಂದು ಸ್ಥಳೀಯ ರಿಕ್ಷಾ ಚಾಲಕರ‌ ಅಭಿಪ್ರಾಯವಾಗಿದೆ.

Related Articles

Back to top button