ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ -ಅಧ್ಯಕ್ಷರಾಗಿ ಜೆ.ಕೆ ರೈ , ಕಾರ್ಯದರ್ಶಿಯಾಗಿ ಶಿವಪ್ರಸಾದ್ ಆಲೆಟ್ಟಿ…

ಸುಳ್ಯ: ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ ಇದರ ವಾರ್ಷಿಕ ಮಹಾಸಭೆಯು ಆ.3 ರಂದು ಬೆಳ್ಳಾರೆ ದೇವಿ ಹೈಟ್ಸ್ ಸಭಾಭವನದಲ್ಲಿ ಜರುಗಿತು.
ಕೆ.ಜೆ.ಯು. ಅಧ್ಯಕ್ಷ ಉಮೇಶ್ ಮಣಿಕ್ಕಾರ್ ರವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆ.ಜೆ. ಯು ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್, ಗೌರವಾಧ್ಯಕ್ಷ ಶರೀಫ್ ಜಟ್ಟಿಪಳ್ಳ, ಕಾರ್ಯದರ್ಶಿ ಯಶ್ವಿತ್ ಕಾಳಮ್ಮನೆ, ಖಜಾಂಜಿ ಶ್ರೀಧರ ಕಜೆಗದ್ದೆ ಉಪಸ್ಥಿತರಿದ್ದರು.
ಈ ಸಂದರ್ಭ ಕಳೆದ ವರ್ಷದ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಲಾಯಿತು. ಬಳಿಕ 2021-22 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ವಾರ್ತಾಲೋಕ ವೆಬ್ ಸೈಟ್ ವರದಿಗಾರ, ಪತ್ರಕರ್ತ ಜೆ.ಕೆ ರೈ, ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ವರದಿಗಾರ ಶಿವಪ್ರಸಾದ್ ಆಲೆಟ್ಟಿ, ಖಜಾಂಜಿಯಾಗಿ ಸುದ್ದಿ ಬಿಡುಗಡೆ ವರದಿಗಾರ ಶಿವರಾಮ ಕಜೆಮೂಲೆ ಸರ್ವಾನುಮತದಿಂದ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ರಮೇಶ್ ನೀರಬಿದಿರೆ, ಶ್ರೀಧರ ಕಜೆಗದ್ದೆ, ಜತೆ ಕಾರ್ಯದರ್ಶಿಗಳಾಗಿ ಪ್ರಜ್ಞಾ ಎಸ್. ನಾರಾಯಣ್, ಕೆ.ಟಿ. ಬಾಗೀಶ್, ಸಂಘಟನಾ ಕಾರ್ಯದರ್ಶಿ ರಶೀದ್ ಬೆಳ್ಳಾರೆ , ಸಾಂಸ್ಕೃತಿಕ ಕಾರ್ಯದರ್ಶಿ ಜಯಶ್ರೀ ಕೊಯಿಂಗೋಡಿ, ಕ್ರೀಡಾ ಕಾರ್ಯದರ್ಶಿ ವಿನಯ್ ಜಾಲ್ಸೂರು, ಸಹ ಸಾಂಸ್ಕೃತಿಕ ಕಾರ್ಯದರ್ಶಿ ಅನಿಲ್ ಕಳಂಜ ರವರನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಉಮೇಶ್ ಮಣಿಕ್ಕಾರ , ನಿರ್ದೇಶಕರುಗಳಾಗಿ ವೆಂಕಟೇಶ್ ಮೇನಾಲ, ಗಣೇಶ್ ಕುಕ್ಕುತ್ತಡಿ, ಕುಶಾಂತ್ ಕೊರತ್ಯಡ್ಕ, ಕೀರ್ತಿ ಹೊದ್ದೆಟ್ಟಿ, ದಯಾಮಣಿ ಸಂಪಾಜೆ, ವಿನಿತಾ ಡಿ.ಸೋಜಾ, ವಿಸ್ಮಯ ಬುಡ್ಲೆಗುತ್ತು ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ಕಳೆದ ಅವಧಿಯ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ ಉಮೇಶ್ ಮಣಿಕ್ಕಾರರವರನ್ನು ಅಭಿನಂದಿಸಲಾಯಿತು.

8b242959 5fc6 4354 A57d 590e3ff24f66 Scaled E1628049867366 300x239

71088b54 54e5 469b 93ca Bdd40e098147 300x290

7f1be13e 3cb9 4ce7 9c47 1bdc5f4c6068 300x225

 

Related Articles