ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ – 7ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪದಗ್ರಹಣ ಕಾರ್ಯಕ್ರಮ…

ಕಲ್ಕಡ್ಕ: ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ನೈತಿಕ ಗುಣಮಟ್ಟ ವನ್ನು ಬೆಳೆಸಿ, ಬೇರೆ ಯಾವುದೇ ಆಸ್ತಿಮಾಡಿ ಕೊಡುವ ಅಗತ್ಯವಿಲ್ಲ ಎಂದು ಬೆಳ್ತಂಗಡಿ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಿವೃತ್ತ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ ಹೇಳಿದರು. ಅವರು ಫೆ. 11 ರಂದು ಪೆರ್ಲಾಪು ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದ ಬಂಟ್ವಾಳ ತಾಲೂಕಿನ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರೀ )ಇದರ 7ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರದಾನ ಭಾಷಣಗಾರರಾಗಿ ಮಾತನಾಡಿದರು . ಟ್ರಸ್ಟ್ ನ ಗೌರವಧ್ಯಕ್ಷರಾದ ಮೋಹನ್ ಕುಮಾರ್ ಕಲ್ಲಾಜೆ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಡೇಶಿವಾಲಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಮಾತನಾಡಿ ಸ್ವಾರ್ಥ ರಹಿತ ಸೇವೆ ದೇವರ ಸೇವೆ ಆಗಿದೆ,ಸಂಘಟನೆ ಇರುವುದು ತಮ್ಮ ರಕ್ಷಣೆಗೆ ಹೊರತು ಉಳಿದವರನ್ನು ನಾಶ ಮಾಡಕೆ ಅಲ್ಲ. ಕಡೇಶಿವಾಲಯ ಗ್ರಾಮ ಪಂಚಾಯತ್ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರರಾಗಲು ಬಿರುವೆರ್ ಕಡೇಶಿವಾಲಯ ಕೊಟ್ಟ ಸಹಕಾರವನ್ನು ಸ್ಮರಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ ವಿ, ಮಾತನಾಡಿ ಹಿಂದು ಧರ್ಮದ ನೆಲೆಗಟ್ಟಿನಲ್ಲಿ ಜಾತಿ ನಿಂತಿದೆ, ಪೋಷಕರು ಮಕ್ಕಳನ್ನು ವರ್ಷಕೊಮ್ಮೆ ತಮ್ಮ ತರವಾಡು ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ನಮ್ಮಸಂಸ್ಕಾರ, ಸಂಸ್ಕೃತಿ ತಿಳಿಸುವ ಅಗತ್ಯವಿದೆ ಎಂದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗೌರವಾಧ್ಯಕ್ಷರಾದ ಜಯಂತ್ ನಡುಬೈಲ್, ಯಕ್ಷಗಾನ ಹಾಸ್ಯ ಕಲಾವಿದ ನಾರಾಯಣ ಉಜಿರೆ ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು .
ಕೃಷಿ ಕ್ಷೇತ್ರ ದಲ್ಲಿ ಸಾಧನೆಗೈದ ಗೌರಿ ಕೆ ಬಂಗೇರ ಬಡಕಬೈಲ್, ನಾಟಿ ಪ್ರಸೂತಿ ಪ್ರವೀಣೆ ಪೂವಕ್ಕ ಕಡೆಕೋಳಿಮಜಲ್, ಕುಲಕಸುಬು ಮೂರ್ತೆ ಗಾರಿಕೆ ಕ್ಷೆತ್ರದಲ್ಲಿ ವಾಸು ಪೂಜಾರಿ ನೆತ್ತರ, ಬಂಟ್ವಾಳ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ ಆದ್ಯೆಕ್ಷೆ ವಿದ್ಯಾರ್ಥಿ ಕುಮಾರಿ ಸಾನ್ವಿ ಇವರುಗಳನ್ನು ಅಭಿನಂದಿಸಲಾಯಿತು .
ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು .ಗಣ್ಯರ ಸಮ್ಮುಖದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಜಾತ್ರ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗೌರವಾಧ್ಯಕ್ಷರಾದ ಜಯಂತ್ ನಡುಬೈಲ್ ಬಿರುವೆರ್ ಸೇವಾ ಟ್ರಸ್ಟ್ (ರೀ )ಕಡೇಶಿವಾಲಯ ಇದರ ಸೇವಾ ಕಾರ್ಯಕ್ರಮ ಉಳಿದ ಸಂಘಟನೆಗಳಿಗೆ ಅನುಕರಣಿಯವಾಗಿದೆ, ಸಂಘಟಯೊಂದಿಗೆ ತಾನು ಕೈಜೋಡಿಸುದಾಗಿ ಹೇಳಿ ಈ ತನಕ ಬಿರುವೆರ್ ಕಡೇಶಿವಾಲಯ ಟ್ರಸ್ಟ್ ನ ಮೂಲಕ ಶಿಕ್ಷಣದ ಪೂರ್ಣ ಖರ್ಚು ನೋಡ್ತಿದ್ದ ಆತ್ಮಿಕಾ ಎನ್ನುವ ವಿದ್ಯಾರ್ಥಿನಿ ಗೆ ತನ್ನ ಅಕ್ಷಯ ಕಾಲೇಜಿನಲ್ಲಿ ಉಚಿತ ಶಿಕ್ಷಣ ನೀಡುದಾಗಿ ತಿಳಿಸಿದರು.
ಟ್ರಸ್ಟ್ ನ ಅಧ್ಯಕ್ಷ ದಿನೇಶ್ ಪೂಜಾರಿ ಸುರ್ಲಾಜೆ, ಕಾರ್ಯದರ್ಶಿ ಯಶವಂತ್ ಪತ್ತು ಕೊಡಂಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ವಿದ್ಯಾದರ ಪೂಜಾರಿ ಕಡೇಶಿವಾಲಯ ಅಧ್ಯಕ್ಷತೆ ಹಾಗೂ ಕಾರ್ಯದರ್ಶಿ ಯಶವಂತ್ ಪತ್ತು ಕೊಡಂಗೆ ಯ ನೂತನ ಸಮಿತಿಯ ಪದಗ್ರಹಣ ಮಾಡಲಾಯಿತು ಲೋಕನಾಥ್ ಪೂಜಾರಿ ತಿಮರಾಜೆ ಸ್ವಾಗತಿಸಿ,ಸಂದ್ಯಾ ವಿದ್ಯಾದರ್ ಹಾಗೂ ಕೀರ್ತಿ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿ,ದಿನೇಶ್ ಪೂಜಾರಿ ಸುರ್ಲಾಜೆ ವಂದಿಸಿ, ದೀಪಕ್ ಹಾಗೂ ಭವ್ಯಶ್ರೀ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

whatsapp image 2024 02 12 at 10.53.11 am (1)

whatsapp image 2024 02 12 at 10.53.12 am

Sponsors

Related Articles

Back to top button