ಸುದ್ದಿ

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ತ್ರಿಮತಸ್ಥ ಪರಿಷತ್ತು ಬಂಟ್ವಾಳ – ಮಾಸಿಕ ಸಭೆ ಸಂಪನ್ನ…

ಬಂಟ್ವಾಳ: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ತ್ರಿಮತಸ್ಥ ಪರಿಷತ್ತು ಬಂಟ್ವಾಳ (ರಿ ) ಇದರ 12ನೆಯ ಮಾಸಿಕ ಸಭೆಯು ಸುಜೀರು ಶ್ರೀ ಮಂಗಳಾದೇವಿ ದೇವಸ್ಥಾನ ಇಲ್ಲಿ ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ದೊಂದಿಗೆ ಸಂಪನ್ನಗೊಂಡಿತು.
ಸಮಾರಂಭದ ಅಧ್ಯಕ್ಷತೆಯನ್ನು ವೇದಮೂರ್ತಿ ಶಿವರಾಮಮಯ್ಯ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ವೇದಮೂರ್ತಿ ಕೃಷ್ಣರಾಜ ಭಟ್ ಕರ್ಬೆಟ್ಟು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿ ಪ್ರಕಾಶ್ ತಂತ್ರಿ, ತಾಲೂಕು ಕಾರ್ಯದರ್ಶಿ ಶ್ರೀನಿಧಿ ಮುಚ್ಚಿನ್ನಾಯ, ತಾಲೂಕು ಸಂಯೋಜಕರು ಸುಬ್ರಹ್ಮಣ್ಯ ಭಟ್, ತಾಲೂಕು ಸಂಘಟನಾ ಕಾರ್ಯದರ್ಶಿ ಎರುಂಬು ಬಾಲಕೃಷ್ಣ ಕಾರಂತ, ತಾಲೂಕು ಜೊತೆ ಕಾರ್ಯದರ್ಶಿ ಗಣೇಶ್ ಭಟ್ ಸುಜೀರು, ಕೋಶಾಧಿಕಾರಿ ವಾಸುದೇವ ಭಟ್, ತಾಲೂಕು ಸಂಚಾಲಕ ವೆಂಕಟರಮಣ ಭಟ್ ಪೈಕ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಅನಂತ ಭಟ್ ಸುಜೀರ್ ಇವರನ್ನು ಸಂಸ್ಥೆಯಿಂದ ಗೌರವಿಸಲಾಯಿತು.

Advertisement

Related Articles

Back to top button