ಪೆರಾಜೆ ಗ್ರಾ. ಪಂ. ನ 2020-21 ಮತ್ತು 21-22 ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಹಂತದ ಗ್ರಾಮ ಸಭೆ…
ಬಂಟ್ವಾಳ: ಪೆರಾಜೆ ಗ್ರಾಮ ಪಂಚಾಯತ್ ನ 2020-21 ಮತ್ತು 21-22 ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಹಂತದ ಗ್ರಾಮ ಸಭೆ ಮಾ. 29ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಾಜೆ ಇಲ್ಲಿ ವಲಯ ಅರಣ್ಯಾಧಿಕಾರಿ ಸಾಮಾಜಿಕ ಅರಣ್ಯ ಇಲಾಖೆ ಬಂಟ್ವಾಳ ಇವರ ಮಾರ್ಗದರ್ಶನದಲ್ಲಿ ನಡೆಯಿತು.
ಸಭೆಯಲ್ಲಿ ಹಾಜರಿದ್ದ ಹಿರಿಯ ನಾಗರಿಕರಾದ ಅಪ್ರಾಯ ಪೈ ಇವರು ಮಾತನಾಡಿ ಕಟ್ಟಡ ಪರವಾನಿಗೆ ಸಂಬಂದಿಸಿದ ಗ್ರಾಮ ಪಂಚಾಯತ್ ಸಂಗ್ರಹಿಸುವ ಕಾರ್ಮಿಕ ಸೆಸ್ಸನ್ನು ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಬಳಸಿಕೊಳ್ಳುವ ಬಗ್ಗೆ ಸರಕಾರಕ್ಕೆ ಪತ್ರ ಬರೆಯುವಂತೆ ಆಗ್ರಹಿಸಿದರು ಹಾಗೆಯೇ 15ನೇ ಹಣಕಾಸು ಯೋಜನೆ ಅಯೋಗ ಅನುದಾನದ ಕ್ರಿಯಾಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಧಿಸುವ ಷರತ್ತುಗಳಿಂದಾಗಿ ಗ್ರಾಮೀಣ ಅಗತ್ಯ ಬೇಡಿಕೆಗಳು ಪೊರೈಸಲು ಕಷ್ಟವಾಗಿದ್ದು ಈ ಸಂಬಂಧ ಅನುದಾನವನ್ನು ಅನಿರ್ಬಬಂದಿತವಾಗಿ ನೀಡಬೇಕೆಂದು ಒತ್ತಾಯಿಸಿದರು ಮತ್ತು ಗ್ರಾಮದ ರಸ್ತೆಗಳು ನಾದುರಸ್ತಿಯಾಗಿದ್ದು ಈ ಸಂಬಂಧ ಹೆಚ್ಚಿನ ಅನುದಾನ ಬಿಡುಗಡೆಗೆ ಸರಕಾರವನ್ನು ಕೇಳಿಕೊಳ್ಳಲು ನಿರ್ಣಯಿಸಲಾಯಿತು. ಹಾಗೂ ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಖಾಯಂ ಆರೋಗ್ಯ ಸಹಾಯಕಿ ಮತ್ತು ಖಾಯಂ ಪಶುವೈಧ್ಯಾಧಿಕಾರಿ ನೀಡಬೇಕೆಂದು ಕೇಳಿಕೊಂಡರು.
ಸ ನಂ 84 ರಲ್ಲಿ 1 ಎಕ್ರೆ 28 ಸೆಂಟ್ಸ್ ಸರಕಾರಿ ಜಾಗವನ್ನು ಧಾರ್ಮಿಕ ಧತ್ತಿ ಇಲಾಖೆಯ ವಿಷ್ಣುಮೂರ್ತಿ ದೈವಸ್ಥಾನದ ಹೆಸರಿಗೆ ಕಾದಿರಿಸಬೇಕೆಂದು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹ ಮಾಡಿದರು ಮತ್ತು ರಸ್ತೆಗೆ ಒತ್ತುವರಿಯಾಗಿ ನಿರ್ಮಿಸಿರುವ ಕಾಂಪೌಂಡ್ ನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.
ಗ್ರಾಮ ಸಭೆಯಲ್ಲಿ ಪೆರಾಜೆ ಗ್ರಾಮ ಪಂಚಾಯತ್ ದ ಅಧ್ಯಕ್ಷರಾದ ರೋಹಿಣಿ ಉಪಾಧ್ಯಕ್ಷರಾದ ಉಮ್ಮರ್ ಮತ್ತು ಸದಸ್ಯರು ಮತ್ತು ವಿವಿಧ ಇಲಾಖೆಯ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಂಚಾಯತ್ ಸಿಬ್ಬಂದಿ ದಿವಾಕರ ವಂದಿಸಿದರು.