ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರಿಂದ ಮತ್ತೊಂದು ಜನಮನ್ನಣೆಯ ಕಾರ್ಯ…
ಬಂಟ್ವಾಳ: ತಾಲೂಕು ಆಸ್ಪತ್ರೆಗೆ 1.66 ಕೋಟಿ ರೂ ವೆಚ್ಚದಲ್ಲಿ 25 ಐಸಿಯು ಬೆಡ್ ಗಳು ಮಂಜೂರಾಗಿ ಅನುಷ್ಠಾನ ಹಂತದಲ್ಲಿದ್ದು, ಇದರ ಜೊತೆಗೆ ರಾಜ್ಯದ 41ತಾಲೂಕು ಆಸ್ಪತ್ರೆಗೆ ಮಂಜೂರಾದ ಟೆಲಿ ಐಸಿಯು ವ್ಯವಸ್ಥೆ ಬಂಟ್ವಾಳದಲ್ಲಿ ಶೀಘ್ರ ಕಾರ್ಯಾರಂಭಗೊಳ್ಳಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ 25 ಐಸಿಯು ಬೆಡ್ ಗಳ ಅನುಷ್ಠಾನ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ಈ ಮೊದಲು ಬಂಟ್ವಾಳದಲ್ಲಿ 3 ಐಸಿಯು ಬೆಡ್ ಗಳು ಮಾತ್ರ ಇದ್ದು, 25 ಐಸಿಯು ಬೆಡ್ ಗಳ ಲಭ್ಯತೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಆಸ್ಪತ್ರೆಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡಲಾಗುತ್ತಿದ್ದು ಅಮೃತ್ ಆರೋಗ್ಯ ಯೋಜನೆಯಡಿ ಬಂಟ್ವಾಳ ತಾಲೂಕಿನ ಬೆಂಜನಪದವು, ರಾಯಿ, ನಾವೂರು ದೈವಸ್ಥಳ ಹಾಗೂ ಪುಣಚ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಗೆ ತಲಾ 20 ಲಕ್ಷ ರೂ ನಂತೆ ಒಟ್ಟು 1 ಕೋಟಿ ರೂ ಅನುದಾನಬಿಡುಗಡೆಯಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ವಿವರಿಸಿದರು.
ಬಂಟ್ಬಾಳ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪುಷ್ಪಲತಾ ಮಾತನಾಡಿ, ಆಸ್ಪತ್ರೆ ಇದೀಗ ಸುಸಜ್ಜಿತ ಆಸ್ಪತ್ರೆಯಾಗಿದ್ದು, ಕಳೆದ ಎರಡೂವರೆ ವರ್ಷಗಳಿಂದ ಎಲ್ಲಾ ಮೂಲಭೂತ ಅಗತ್ಯಗಳನ್ನುಒದಗಿಸಲು ಶಾಸಕರು ವಿಶೇಷ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಗೆ ಅತೀ ಅಗತ್ಯವಾಗಿರುವ ಸಿಸಿ ಕ್ಯಾಮೆರ, ಹೆಚ್ಚುವರಿ ಬೆಡ್, ಜನರೇಟರ್ ವ್ಯವಸ್ಥೆ, ಶಸ್ತ್ರ ಚಿತ್ಸೆಗೆ ಅಗತ್ಯವಿರುವ ಎಲ್ಲಾ ಸಲಕರಣೆಗಳನ್ನೂ ಕೂಡ ಒದಗಿಸಲಾಗಿದೆ ಎಂದರು.