ಶ್ರೀರಾಮ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಪೋಷಕರ ಸಭೆ…

ಬಂಟ್ವಾಳ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಂಸ್ಕಾರದ ಕೊರತೆಯಾಗಬಾರದು, ಈ ನಿಟ್ಟಿನಲ್ಲಿ ಪೋಷಕರಾದವರು ಹಣದಿಂದ ಯೋಚನೆ ಮಾಡದೆ ಗುಣದಿಂದ ಯೋಚನೆ ಮಾಡುವ ಮೂಲಕ ಮಕ್ಕಳಿಗೆ ಮಾದರಿಯಾಗಬೇಕು. ನಾವೆಲ್ಲ ಒಂದಾಗಿ ದೇಶ, ಭಾಷೆ, ಧರ್ಮವನ್ನು ಉಳಿಸೋಣ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಶ್ರೀರಾಮ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಪೋಷಕರ ಸಭೆಯಲ್ಲಿ ನುಡಿದರು.
ಡಿ. 30 ರಂದು ರಂದು ನಡೆದ ಈ ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ವಸಂತಮಾಧವ, ಡಾ. ಕಮಲಾ ಪ್ರಭಾಕರ್ ಭಟ್, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ನಾಗೇಶ್, ಪದವಿ ವಿಭಾಗದ ಪ್ರಾಚಾರ್ಯರಾದ ಶ್ರೀ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ ಉಪಸ್ಥಿತರಿದ್ದರು. ಪದವಿ ಪೂರ್ವ ವಿಭಾಗದ ಪ್ರಾಚಾರ್ಯರಾದ ಶ್ರೀ ವಸಂತ ಬಲ್ಲಾಳ್ ಶ್ರೀಮಾನ್ ಸ್ವಾಗತಿಸಿ ಹಿಂದಿ ಉಪನ್ಯಾಸಕಿಯಾದ ಶ್ರೀಮತಿ ಶೋಭಾ ವಿ ಶೆಟ್ಟಿಯವರು ನಿರೂಪಣೆ ಮತ್ತು ಧನ್ಯವಾದವನ್ನು ನಿರ್ವಹಿಸಿದರು.