ಸಜಿಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಇದರ ಬ್ರಹ್ಮಕಲಶೋತ್ಸವ- ಪ್ರಥಮ ದಿನದ ಧರ್ಮಸಭೆ…
ಬಂಟ್ವಾಳ: ಸಜಿಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಇದರ ಬ್ರಹ್ಮಕಲಶೋತ್ಸವ ಹಾಗು ಜಾತ್ರಾ ಮಹೋತ್ಸವದ ಪ್ರಥಮ ದಿನದ ಧರ್ಮಸಭೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ವೆಂಕಟೇಶ್ವರ ಭಟ್ ಅಧ್ಯಕ್ಷತೆಯಲ್ಲಿ ಜರಗಿತು. ಬ್ರಹ್ಮಶ್ರೀ ನೀಲೇಶ್ವರ ಕೆ ಉಚ್ಚಿಲತಾಯ ಪದ್ಮನಾಭ ತಂತ್ರಿಗಳು ಆಶೀರ್ವಚನ ನೀಡಿದರು.
ಎo ಸುಬ್ರಮಣ್ಯ ಭಟ್ ಸಜಿಪ ಮಾಗಣೆ ತಂತ್ರಿ, ರಮೇಶ್ ಕುಮಾರ್ ಧರ್ಮದರ್ಶಿಗಳು ಆದಿಮಾಯೆ ನಾಗಬ್ರಹ್ಮ ದೇವಸ್ಥಾನ ಹನ್ನೆರಡು ಮುಡಿ ಕುರ್ನಾಡು, ಚಂದ್ರಹಾಸ ಪಂಡಿತ್ ಹೌಸ್ ಅಧ್ಯಕ್ಷರು ಬಿಜೆಪಿ ಮಂಗಳೂರು ಮಂಡಲ, ಸುನಿತಾ ಚಂದ್ರಕುಮಾರ್ ಶೆಟ್ಟಿ ಮಾರ್ನಬೈಲ್, ವಿಠ್ಠಲದಾಸ ಅಮೀನ್ ಅಧ್ಯಕ್ಷರು ಸಜೀಪಾಪಡು ಗ್ರಾಮ ಪಂಚಾಯತ್ , ಸಂಜೀವ ಪೂಜಾರಿ ಮಾಲಕರು ಗುರುಕೃಪಾ ಪೆಟ್ರೋಲಿಯಂ ಬಿಸಿ ರೋಡ್, ಸುರೇಶ್ ಪೂಜಾರಿ ಮಾಲಕರು ಪಿಪಿಎಸ್ ಕನ್ಸ್ಟ್ರಕ್ಷನ್, ದೇವದಾಸ ಶೆಟ್ಟಿ ಸಜೀಪ ಗುತ್ತು, ಮಿಥುನ್ ಶೆಟ್ಟಿ ಸಜಿಪ, ರೋಹಿತ್ ಶೆಟ್ಟಿ ನಗ್ರಿ ಗುತ್ತು, ರತ್ನಾಕರ ಶೆಟ್ಟಿ ನ್ಯಾಯವಾದಿಗಳು ಮುಂಬೈ, ಮೊದಲಾದವರು ಶುಭಹಾರೈಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರನಾಥ ಎಂ ಭಂಡಾರಿ ಪುಣ್ಕೆ ಮಜಲು ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೆ ರಾಧಾಕೃಷ್ಣ್ನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಆರಾಧನ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ ಗುತ್ತು ಧನ್ಯವಾದ ನೀಡಿದರು.