ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ಪಾದೆ – 11ನೇ ವರ್ಷದ ಗಣೇಶ ಚತುರ್ಥಿ…

ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ಪಾದೆ ಇಲ್ಲಿ 11ನೇ ವರ್ಷದ ಗಣೇಶ ಚತುರ್ಥಿ ಶಾರದಾ ಶಾಖೆ ಇದರ ಆಶ್ರಯದಲ್ಲಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ಪಾದೆ ಇಲ್ಲಿ 11ನೇ ವರ್ಷದ ಗಣೇಶ ಚತುರ್ಥಿ ಅಂಗವಾಗಿ ಮಕ್ಕಳಿಗೆ, ಯುವಕರಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ವಹಿಸಿ, ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರು ಗಣೇಶ ಚತುರ್ಥಿ ದಿನವನ್ನು ಸಾಮೂಹಿಕ ಹಬ್ಬವನ್ನಾಗಿ ಆಚರಿಸುವ ಪದ್ಧತಿಯನ್ನು ಆರಂಭಿಸಿ, ಬೆಳೆಸಿ ಈತನಕ ಉಳಿಸಿಕೊಂಡು ಬರಲಾಗಿದೆ. ತನ್ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಬಹುದಾಗಿದೆ ಎಂದು ತಿಳಿಸಿದರು.
ತಿಮ್ಮಪ್ಪ ಗಟ್ಟಿ ವಿಶ್ವನಾಥ ಪೂಜಾರಿ, ದಿನೇಶ್ ಮಯ್ಯ, ಅವಿನಾಶ್, ರಾಕೇಶ್, ಪುರುಷೋತ್ತಮ ಗಟ್ಟಿ, ಶ್ರೀನಿವಾಸ ಮಯ್ಯ, ಗಣೇಶ್ ಕುಲಾಲ್ ಉಪಸ್ಥಿತರಿದ್ದರು.