90ರ ವೃದ್ದೆ, ಪರಿಸರ ಪ್ರೇಮಿ ಶ್ರೀಮತಿ ಯಮುನಾರವರಿಂದ ಪರಿಸರ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ…
ಪ್ಲಾಸ್ಟಿಕ್ ಮುಕ್ತಗೊಳಿಸಿ ರಸ್ತೆ ಸ್ವಚ್ಚತಾ ಕಾರ್ಯ ಕ್ರಮ...

ಬಂಟ್ವಾಳ-ಸೆ.25 :ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದ ದ್ವಾರ ಸೀತಾರಾಮ ನಗರ ಕೊಡಾಜೆಯಲ್ಲಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮಕ್ಕೆ 90 ವರ್ಷದ ವೃದ್ದೆ ಕಳೆದ 40 ವರ್ಷಗಳಿಂದ ಶ್ರೀರಾಮಚಂದ್ರಾ ಪುರ ಮಠದಲ್ಲಿ ಸೇವಾವೃತ್ತಿ ಮಾಡುತ್ತಿದ್ದ ಪರಿಸರಪ್ರೇಮಿ ಶ್ರೀಮತಿ ಯಮುನಾ ಅವರು ಹಲಸಿನ ಗಿಡವನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಮಾಣಿ ಲಯನ್ಸ್ ಕ್ಲಬ್ ಮತ್ತು ಸ್ಥಳೀಯವಾದ,ಸೀತಾರಾಮ ಬಳಗ,ಗುಡಚಾಮುಂಡೇಶ್ವರಿ ಸೇವಾ ಟ್ರಸ್ಟ್, ವರಮಹಾಲಕ್ಷ್ಮೀ ಸೇವಾಸಮಿತಿ ಸಹಕಾರದೊಂದಿಗೆ ರಾಷ್ಟ್ರೀಯ ಹೆದ್ದಾರಿ ಮಾಣಿ ಕೊಡಾಜೆಯಿಂದ,ರಾಷ್ಟ್ರೀಯ ಹೆದ್ದಾರಿ ಬುಡೋಳಿ ಬೊಳ್ಳುಕಲ್ಲು ವರೆಗಿನ ಎರಡು ಕಿಲೋಮೀಟರ್ ರಸ್ತೆಯಲ್ಲಿ ಪ್ಲಾಸ್ಟಿಕ್ ಕಸ,ಬಾಟಲಿ,ಹಾಗೂ ತ್ಯಾಜ್ಯಗಳನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.ಬಸ್ ಸ್ಟೇಂಡ್ ಹಾಗೂ ಮಿತ್ತಪೆರಾಜೆ ಅಂಗನವಾಡಿಯಿಂದ ಬೊಳ್ಳುಕಲ್ಲು ಶ್ರೀದೇವಿ ಭಜನಾ ಮಂದಿರದವರೆಗೆ ರಸ್ತೆ ಬದಿ ಸ್ವಚ್ಚಗೊಳಿಸಲಾಯಿತು.
ಲಯನ್ಸ್ ಪ್ರಾಂತ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪಾಂಡುಬೆಟ್ಟು ಶುಭಹಾರೈಸಿದರು
ಲಯನ್ಸ್ ಕ್ಲಬ್ ಅಧ್ಯಕ್ಷ ಜನಾರ್ದನ ಪೆರಾಜೆ ಗಿಡನೆಟ್ಟು ಸ್ವಚ್ಚ ಪರಿಸರವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಉಪನ್ಯಾಸಕ ಜಯಾನಂದ ಪೆರಾಜೆ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು. ನಿವೃತ್ತ ಸೈನಿಕ ಮಾಧವ ಪಾಳ್ಯ,ಪೊಲೀಸ್ ನಿವೃತ್ತ ಪೊಲೀಸ್ ಅಧಿಕಾರಿಉಮೇಶ್ ,ಉಪನ್ಯಾಸಕ ಯತಿರಾಜ,ಶಾರೀರಿಕ ಶಿಕ್ಷಕ ದಿನಕರ್,ಗ್ರಾ.ಪಂ. ಸದಸ್ಯ ರಾಜಾರಾಮ ಕಾಡೂರು,ಮಾಜಿ ಸದಸ್ಯರಾದ ಶ್ರೀನಿವಾಸ ಪೂಜಾರಿ,ಉಮೇಶ ಎಸ್ಪಿ,ಭಾರತಿ ಪೆರಾಜೆ,ಗುಲಾಬಿ ಮೊದಲಾದವರಿದ್ದರು.
ಮಾಜಿ ತಾ.ಪಂ.ಸದಸ್ಯ ಮೋಹನ್ ಪಿ.ಎಸ್.,ಲಯನ್ಸ್ ಕೋಶಾಧಿಕಾರಿ ರಾಜೇಶ್,ವಿನ್ಸೆಂಟ್ ಲಸ್ರಾದೋ,ರೊನಾಲ್ಡ್ ಮೋನೀಸ್ ಸಹಕರಿಸಿದರು.