ಮೂಡುಬಿದಿರೆ – ತಾಳ ಪ್ರಕ್ರಿಯೆ ಕಾರ್ಯಾಗಾರ…

ಮೂಡುಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಶನ್(ರಿ) ಮೂಡುಬಿದಿರೆ ಆಶ್ರಯದಲ್ಲಿ ಜ.31 ಮತ್ತು ಫೆ.1 ರಂದು ಭರತನಾಟ್ಯ -ಸಂಗೀತ ಗುರುಗಳು, ಪರೀಕ್ಷಾರ್ಥಿಗಳು ಮತ್ತು ಆಸಕ್ತರಿಗಾಗಿ ಎರಡು ದಿನಗಳ ತಾಳ ಪ್ರಕ್ರಿಯೆ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಸಂಗೀತ ಗುರು ಶ್ರೀ ಕೆ. ವಿ. ರಮಣ್ ಮಂಗಳೂರು, ವಿದ್ವಾನ್ ಮಂಜುನಾಥ್ ಎಸ್ ಪುತ್ತೂರು ಮತ್ತು ವಿದುಷಿ ಅಯನಾ ವಿ ರಮಣ್ ಮೂಡುಬಿದಿರೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಾಗಾರದಲ್ಲಿ ತಾಳ, ಕಾಲ, ಜಾತಿ, ಗತಿ, ಮುಕ್ತಾಯಗಳ ರಚನೆ, ಜತಿಸಂಯೋಜನೆ, ನಟುವಾಂಗದ ವ್ಯಾಯಾಮ, ಚತುರವಧಾನ, ದ್ವಿತಾಳ , ಸೋದಾಹರಣ ಉಪನ್ಯಾಸ ಒಳಗೊಂಡಿದೆ. ಮೊದಲ 50 ನೋಂದಣಿಗೆ ಆದ್ಯತೆ ನೀಡಲಿದ್ದು, ಆಸಕ್ತರು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಅಂಜಲಿ, ಫೋ: 8892796540 ಅವರನ್ನು ಸಂಪರ್ಕಿಸಬಹುದಾಗಿದೆ.