ಕಟೀಲು ಯಕ್ಷಗಾನ ಮೇಳ ಸರ್ಕಾರದ ಸುಪರ್ದಿಗೆ – ಧಾರ್ಮಿಕ ದತ್ತಿ ಇಲಾಖೆ ಆದೇಶ…
ಮಂಗಳೂರು: ಖಾಸಗಿ ಒಡೆತನದಲ್ಲಿದ್ದ ಕಟೀಲು ಯಕ್ಷಗಾನ ಮೇಳ ಸರ್ಕಾರದ ವಶವಾಗಿದೆ. ಈ ಬಗ್ಗೆ ಅ. 30 ರಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದು, ಸಾರ್ವಜನಿಕ ಏಲಂ ಮೂಲಕ ಯಕ್ಷಗಾನ ನಡೆಸಲು ಮೇಳ ನಡೆಸಲು ಸೂಚನೆ ನೀಡಿದ್ದಾರೆ. ದ.ಕ ಜಿಲ್ಲಾಧಿಕಾರಿ ಮೇಲುಸ್ತುವಾರಿಯಲ್ಲಿ ಪಾರದರ್ಶಕವಾಗಿ ನಡೆಸಲು ಆದೇಶದಲ್ಲಿ ತಿಳಿಸಲಾಗಿದೆ.
ಕಟೀಲು ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿದ್ದು, ಯಕ್ಷಗಾನ ಮೇಳಗಳನ್ನ ವಂಶಪಾರಂಪರ್ಯವಾಗಿ ಬಂದ ಖಾಸಗಿ ಯಜಮಾನಿಕೆಯಲ್ಲಿ ನಡೆಸಲಾಗುತ್ತಿತ್ತು. ಯಕ್ಷಗಾನ ಮೇಳಗಳ ತಿರುಗಾಟದಲ್ಲಿ ಸರ್ಕಾರದ ಹಸ್ತಕ್ಷೇಪವಿರಲಿಲ್ಲ. ಆದ್ರೆ ಇದೀಗ ಕಟೀಲು ಯಕ್ಷಗಾನ ಮೇಳಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರುಗಳ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ