ಲೊರೆಟ್ಟೋ ಹಿಲ್ಸ್ ಕ್ಲಬ್ ಗೆ ಜಿಲ್ಲಾ ಮಟ್ಟದ ‘ ತ್ರಿವಳಿ ಪ್ರಶಸ್ತಿ ಗರಿ’,  ಜುಲೈ 6ರಂದು ಪದಗ್ರಹಣ…

ಬಂಟ್ವಾಳ:ಕಳೆದ 8 ವರ್ಷಗಳ ಹಿಂದೆ ಅವಿಲ್ ಮಿನೇಜಸ್ ಸ್ಥಾಪಕಾಧ್ಯಕ್ಷತೆ ಯಲ್ಲಿ  ಆರಂಭ ಗೊಂಡ ಲೋರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಕಳೆದ ಸಾಲಿನಲ್ಲಿ ಜಿಲ್ಲೆಯ ಅತ್ಯುನ್ನತ ಡೈಮಂಡ್ ಪ್ಲಸ್ ಸಹಿತ ಜಿಲ್ಲಾ ಮಟ್ಟದ 3 ಪ್ರಶಸ್ತಿ ಗಳಿಸಿಕೊಂಡಿದ್ದು, ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜುಲೈ 6 ರಂದು ಸಂಜೆ ಗಂಟೆ 6.30ಕ್ಕೆ ಲೋರೆಟ್ಟೋ ಹಿಲ್ಸ್ ಸಭಾಂಗಣ ದಲ್ಲಿ ನೆರವೇರಲಿದೆ.
ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಜಿಲ್ಲಾ ಗವರ್ನರ್ ಕೇಶವ ಎಚ್. ಆರ್., ಕ್ಲಬ್ಬಿನ ಸಲಹೆಗಾರ ಮಾಜಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್, ಸಹಾಯಕ ಗವರ್ನರ್  ಸಿಎ ಉಮೇಶ್ ರಾವ್ ಮಿಜಾರ್ ಮತ್ತಿತರ ಗಣ್ಯರು ಭಾಗವಹಿಸಲಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರ ಗಳ ಸಾಧಕರಿಗೆ ಸನ್ಮಾನ ನಡೆಯಲಿದೆ.
ಪ್ರಶಸ್ತಿ:
ಕಳೆದ ಸಾಲಿನಲ್ಲಿ ಕ್ಲಬ್ಬಿನ ಅಧ್ಯಕ್ಷ ಸುರೇಶ ಶೆಟ್ಟಿ ಸಿದ್ದಕಟ್ಟೆ ಮತ್ತು ಕಾರ್ಯದರ್ಶಿ ರಾಜೇಶ್ ಶೆಟ್ಟಿ ಸೀತಾಳ ನೇತೃತ್ವದಲ್ಲಿ  ನಡೆಸಿದ್ದ ವಿವಿಧ ಸೇವಾ ಚಟುವಟಿಕೆ ಸೇರಿದಂತೆ ರೋಟರಿ ಸಂಸ್ಥೆಗೆ ಸದಸ್ಯರು ನೀಡಿದ ದೇಣಿಗೆ ಮತ್ತು ಇಮೇಜ್ ವೃದ್ಧಿ ಗೊಳಿಸಿದ ಪರಿಣಾಮ ಜಿಲ್ಲಾ ಮಟ್ಟದ  3 ಪ್ರಶಸ್ತಿಗಳು ಒಲಿದು ಬಂದಿದೆ. ಕ್ಲಬ್ಬಿನ ಮಾಜಿ ಅಧ್ಯಕ್ಷೆ ಶ್ರುತಿ ಮಾಡ್ತಾ ನೇತೃತ್ವದಲ್ಲಿ ಮಂಗಳೂರಿನಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಹಿಳಾ ಸಮ್ಮೇಳನಕ್ಕೂ ಪ್ರಶಸ್ತಿ ದೊರೆತಿದೆ.
ಕ್ಲಬ್ಬಿನ ವಿಶೇಷತೆ:
ಲೋರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸ್ಥಾಪನೆ ಗೊಂಡ ಪ್ರಥಮ ವರ್ಷದಲ್ಲೇ ಸ್ವಂತ ಕಟ್ಟಡ ನಿರ್ಮಿಸಿದೆ. ಕಳೆದ 8 ವರ್ಷಗಳ ಅವಧಿಯಲ್ಲಿ  ವಿವಿಧ ಅಂಗನವಾಡಿಗಳಿಗೆ ಮೂಲ ಸೌಕರ್ಯ ಸೇರಿದಂತೆ ಹಲವು ಶಾಲೆಗಳಿಗೆ ಹಣ್ಣಿನ ಗಿಡ ಸಹಿತ ಪುಸ್ತಕ, ಬ್ಯಾಗ್, ಶುದ್ಧ ಕುಡಿಯುವ ನೀರಿನ ಘಟಕ, ಧ್ವನಿವರ್ಧಕ, ರಂಗಮಂಟಪ ಒದಗಿಸಿದೆ. ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ಬಡ ಕುಟುಂಬಕ್ಕೆ ಮನೆ ಹಸ್ತಾಂತರ ಹೀಗೆ ಸುಮಾರು ರೂ. 1.5  ಕೋಟಿಗೂ ಮಿಕ್ಕಿ ಮೊತ್ತ ವಿನಿಯೋಗಿಸಲಾಗಿದೆ. ರೋಟರಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕಂಬಳ ಕೂಟ ಆಯೋಜಿಸಿದ್ದು, ಇದು ಮುಂದೆಯೂ ಹೀಗೆ ಮುಂದುವರಿಯಲಿದೆ ಎಂಬ ಭರವಸೆ ನಮ್ಮಲಿದೆ.
ಸುದ್ದಿಗೋಷ್ಠಿ ಯಲ್ಲಿ ಉಪಸ್ಥಿತರು:
ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಕ್ಲಬ್ಬಿನ ಮಾಜಿ ಜಿಲ್ಲಾ ಸಹಾಯಕ ಗವರ್ನರ್ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ನಿಯೋಜಿತ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ನಿಕಟ ಪೂರ್ವ ಅಧ್ಯಕ್ಷ ಸುರೇಶ್ ಶೆಟ್ಟಿ ಸಿದ್ದಕಟ್ಟೆ, ನಿಯೋಜಿತ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ಲೋರೆಟ್ಟೋ ಹಿಲ್ಸ್, ನಿಯೋಜಿತ ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ.

Sponsors

Related Articles

Back to top button