ಸ್ಪೀಕರ್ ಯು ಟಿ ಖಾದರ್ ವಿದೇಶ ಪ್ರವಾಸ – ಯು ಕೆ ನಲ್ಲಿ ಸ್ವಾಗತ…

ಮಂಗಳೂರು: ವಿದೇಶ ಪ್ರವಾಸದಲ್ಲಿರುವ ಸ್ಪೀಕರ್ ಯು ಟಿ ಖಾದರ್ ಫರೀದ್ ಅವರು ಯು ಕೆ ಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ದ ಕ ಜಿಲ್ಲಾ ಎನ್ ಎಸ್ ಯು ಐ ಸಾಮಾಜಿಕ ಜಾಲತಾಣದ ಸಂಯೋಜಕ ಟಿ ಎಂ ಶಾಜ್ ತೆಕ್ಕಿಲ್ ಸ್ವಾಗತಿಸಿದರು.
ಸ್ಪೀಕರ್ ಯು ಟಿ ಖಾದರ್ ಫರೀದ್ ಅವರನ್ನು ಲಂಡನ್ ನ ಹಿಲ್ಟನ್ ಹೋಟೆಲ್ ನಲ್ಲಿ ಸ್ವಾಗತ ಮಾಡಿದ ದ ಕ ಜಿಲ್ಲಾ ಎನ್ ಎಸ್ ಯು ಐ ಸಾಮಾಜಿಕ ಜಾಲತಾಣದ ಸಂಯೋಜಕರಾದ ಟಿ ಎಂ ಶಾಜ್ ತೆಕ್ಕಿಲ್ ಅವರು ರೋಹೆಮಪ್ಟಾನ್ ವಿಶ್ವ ವಿದ್ಯಾನಿಲಯದ ಪದವಿ ವಿದ್ಯಾರ್ಥಿಯಾಗಿದ್ದಾರೆ.