ಇಬ್ರಾಹಿಂ ಕುಕ್ಕುಂಬಳ ನಿಧನ -ಟಿ ಎಂ ಶಾಹಿದ್ ತೆಕ್ಕಿಲ್ ಸಂತಾಪ…
ಸುಳ್ಯ :ಅರಂತೋಡಿನ ದಿವಂಗತ ಪಟೇಲ್ ಖದೀಜಮ್ಮ ಮತ್ತು ದಿವಂಗತ ಅಹಮದ್ ಬ್ಯಾರಿ ಅವರ ಪುತ್ರ ವ್ಯಾಪಾರಿ ಮತ್ತು ಕೃಷಿಕರಾಗಿದ್ದ ಇಬ್ರಾಹಿಂ ಕುಕ್ಕುಂಬಳ (86ವ) ಇಂದು ಅರಂತೋಡಿನಲ್ಲಿ ನಿಧನರಾದರು.
5 ಹೆಣ್ಣು, 6 ಗಂಡು ಮಕ್ಕಳು ಮತ್ತು ಅಪಾರ ಅಭಿಮಾನಿ ವೃಂದ ಹೊಂದಿದ್ದ ಅವರು ಅರಂತೋಡಿನ ಪಟೇಲರಾಗಿದ್ದ ದಿವಂಗತ ಅಹಮದ್ ಕುಂಞಿ ಹಾಜಿಯವರ ಮೊಮ್ಮಗ.
ಇಬ್ರಾಹಿಂ ಕುಕ್ಕುಂಬಳ ಅವರ ನಿಧನಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕ್ಕಾಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಸಂತಾಪ ವ್ಯಕ್ತಪಡಿಸಿದ್ದಾರೆ.