ಉಪ್ಪಳ – ಸ್ಪೀಕರ್ ಖಾದರ್ ರವರಿಂದ ಇವಾಲ್ವೆ ಟೊಯೋಟೋ ಶೋರೂಂ ಉದ್ಘಾಟನೆ…

ಉಪ್ಪಳ: ಉಪ್ಪಳದಲ್ಲಿ ಪ್ರಾರಂಭವಾದ ಇವಾಲ್ವೆ ಮೋಟಾರ್ಸ್ ಟೊಯೋಟ ಶೋರೂಂನ ಉದ್ಘಾಟನೆಯನ್ನು ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ ಖಾದರ್ ರವರು ಸೆ. 7 ರಂದು ನರವೇರಿಸಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕೆ.ಪಿ.ಸಿ.ಸಿ ಮುಖ್ಯ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಭಾಗವಹಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರ್, ಮಂಗಳ್ಪಾಡಿ ಪಂಚಾಯತ್ ಅಧ್ಯಕ್ಷ ರುಬೀನಾ ನೌಫಲ್, ಹಾಗೂ ಗೋಲ್ಡನ್ ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.

