ಮಂಗಳೂರಿನ ಎಡ್ಲಿನ್ ಕ್ಯಾಸ್ಟೆಲೀನೋ ಅವರಿಗೆ ‘ಮಿಸ್ ದಿವಾ ಯುನಿವರ್ಸ್ – 2020 ’….

ಮುಂಬೈ: ಮಂಗಳೂರಿನ ಬೆಡಗಿ ಎಡ್ಲಿನ್ ಕ್ಯಾಸ್ಟೆಲೀನೋ ಅವರಿಗೆ ಪ್ರಸಕ್ತ ಸಾಲಿನ ‘ಲಿವಾ ಮಿಸ್ ದಿವಾ ಯುನಿವರ್ಸ್ 2020’ ಪ್ರಶಸ್ತಿ ದೊರೆತಿದೆ.
ಮುಂಬೈನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಅವರು ಪ್ರಶಸ್ತಿಯನ್ನು ಪಡೆದಿದ್ದು, ಹಿಂದಿನ ಆವೃತ್ತಿಯ ವಿಜೇತೆ ವರ್ತಿಕಾ ಸಿಂಗ್ ಕಿರೀಟ ತೊಡಿಸಿದರು. ಎಡ್ಲಿನ್ ಕ್ಯಾಸ್ಟೆಲೀನೋ ಅವರು ವರ್ಷಾಂತ್ಯದಲ್ಲಿ ನಡೆಯಲಿರುವ ‘ಮಿಸ್ ಯುನಿವರ್ಸ್’ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಎರಡನೇ ಸ್ಥಾನ ಗಳಿಸಿದ ಜಬಲ್ ಪುರದ ಆವೃತಿ ಚೌಧರಿ ಅವರು ‘ಮಿಸ್ ದಿವಾ ಸುಪ್ರನ್ಯಾಷನಲ್’ ಹಾಗೂ ಪುಣೆಯ ನೇಹಾ ಜೈಸ್ವಾಲ್ ಅವರು ‘ಮಿಸ್ ದಿವಾ ರನ್ನರ್-ಅಪ್’ ಕಿರೀಟಕ್ಕೆ ಭಾಜನರಾಗಿದ್ದಾರೆ. ಈ ಪೈಕಿ ಆವೃತಿ ಅವರು ಮಿಸ್ ಸುಪ್ರನ್ಯಾಷನಲ್ ಪೇಜೆಂಟ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಸ್ಪರ್ಧಾಳುಗಳು ಮಾಜಿ ಮಿಸ್ ಯೂನಿವರ್ಸ್ ಲಾರಾ ದತ್ತಾ ಅವರಿಂದ ಮಾರ್ಗದರ್ಶನ ಮತ್ತು ತರಬೇತಿ ಪಡೆದಿದ್ದರು.