ಬಿಳಿಯಾರು 24ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ…
ಸುಳ್ಯ: ಆರಂತೋಡು ಗ್ರಾಮದ ಬಿಳಿಯಾರು ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣ ಸಮಿತಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಬಿಳಿಯಾರು ಶಾಲಾ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮಂಜುನಾಥ ಬಿಳಿಯಾರು ವಹಿಸಿದರು.
ಕಾರ್ಯಕ್ರಮ ವನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ರಾದ ಪಿ.ಬಿ.ಸುಧಾಕರ ರೈ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು. ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ್, ನಿವೃತ ಪೋಲಿಸ್ ಪದ್ಮಯ್ಯ ಪೂಜಾರಿಮನೆ, ಜನಪ್ರಕಾಶ್,ಸುಳ್ಯ ತಾಲ್ಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸೋಮಶೇಖರ್ ಪೈಕ, ಮಹೇಶ್,ಸೇರಿದಂತೆ ಮುಂತಾದವರು ಉಪಸ್ಥಿತಿದ್ದರು. ಕೆ.ಪಿ.ಕುಸುಮಾದರ ಸ್ವಾಗತಿಸಿ,ಆನಂದ ಬಿಳಿಯಾರು ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭ…
ಕಳೆದ 24 ವರ್ಷಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಅರ್ಥ ಪೂರ್ಣ ಕಾರ್ಯಕ್ರಮ ವನ್ನು ಆಚರಿಸಿದ್ದಾರೆ. ಇದು ಮುಂದಿನ ತಲೆಮಾರಿಗೆ ಮಾದರಿಯಾಗಿದೆ ಮುಂದಿನ ವರ್ಷ ಬೆಳ್ಳಿ ಹಬ್ಬ ಆಚರಣೆ ವನ್ನು ಬಹಳ ಅತ್ಯಂತ ವಾಗಿ ಮೂರು ದಿನಗಳ ಕಾರ್ಯಕ್ರಮವಾಗಿ ನಡೆಯಬೇಕು. ನಾವು ಅಸುಪಾಸಿನ ಜನರನ್ನು ಕರೆದು ನೆರೆಯ ಗ್ರಾಮಗಳ ಸಹಕಾರವನ್ನು ಕೋರುತ್ತಾ ಅದ್ದೂರಿಯಾಗಿ ಬೆಳ್ಳಿ ಹಬ್ಬವನ್ನು ಅಚರಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ ಕೆ.ಅರ್.ಗಂಗಾಧರ ಹೇಳಿದರು.
ಇನ್ನೊರ್ವ ಮುಖ್ಯ ಅತಿಥಿ ಡಾ.ಲಕ್ಷ್ಮೀಶ ಮಾತನಾಡಿ, ಕೇವಲ ಒಂದು ಧರ್ಮವನ್ನು ಗುರುತಿಸಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸದೆ ಎಲ್ಲಾ ಧರ್ಮದವರನ್ನು ಗುರುತಿಸಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿರುವುದು ಶ್ಲಾಘನಿಯ ಎಂದು ಹೇಳಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಪಾಧ್ಯಾಯ ಶ್ರೀ ಮತಿ ಶೀಲಾವತಿ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು.
ಎಸ್ ಡಿ ಎಮ್ ಸಿ ಅಧ್ಯಕ್ಷ ವಂದನಾ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸೋಮಶೇಖರ ಪೈಕ,ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯದರ್ಶಿ ಮಹೇಶ್ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಂಗನವಾಡಿ ಮಕ್ಕಳ ಆಟೋಟ ಸ್ಪರ್ಧೆ ಯಲ್ಲಿ ವಿಜೇತ ರದವರಿಗೆ ಬಿಳಿಯಾರು ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ಶ್ರೀ ಮತಿ ವಂದನಾ ವಿತರಿಸಿದರು. ಶಾಲಾ ಮಕ್ಕಳ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಡಾ.ಲಕ್ಷ್ಮೀಶ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಮಂಜುನಾಥ ಬಹುಮಾನ ವಿತರಿಸಿದರು. ಪುರುಷರ ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು.ಎಣ್ಣೆ ಕಂಬ,ಹಗ್ಗ ಜಗ್ಗಾಟ ಮತ್ತು ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಹೊಡೆಯುವ ಸ್ಪರ್ಧೆ ಯಲ್ಲಿ ವಿಜೇತ ರದವರಿಗೆ ನಿವೃತ ಪ್ರಾಂಶುಪಾಲ ಕೆ.ಆರ್ ಗಂಗಾಧರ್ ಬಹುಮಾನ ವಿತರಿಸಿದರು. ಆನಂದ ಸ್ವಾಗತಿಸಿ, ಕೆ ಪಿ.ಕುಸುಮಾಧರ ನಿರೂಪಿಸಿದರು.